ಶ್ರೀ ಕ್ಷೇತ್ರ ಮೈರಲ್ಕೆ: ದೇವಸ್ಥಾನದ ದ್ವಾರ ಪ್ರತಿಷ್ಠೆ ಮತ್ತು ಕೊಡಿಮರ ತೈಲಾಧಿವಾಸ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಓಡಿಲ್ನಾಳ: ಮೈರಲ್ಕೆ  ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋಧ್ಧಾರದ ಪ್ರಯುಕ್ತ ದೇವಸ್ಥಾನದ ದ್ವಾರ ಪ್ರತಿಷ್ಠೆ ಮತ್ತು ಕೊಡಿಮರ ತೈಲಾಧಿವಾಸ ಕಾರ್ಯಕ್ರಮ ಎ.16ರಂದು ಜರಗಿತು.

ರವಿ ಕುಮಾರ್ ಭಟ್ ಬೆಳ್ತಂಗಡಿ ಹಾಗೂ ಅರ್ಚಕ ವೃಂದದವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ನಂತರ  ನಡೆದ ಸಭಾ ಕಾರ್ಯಕ್ರಮದ  ಅಧ್ಯಕ್ಷತೆಯನ್ನು  ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೆ.ವಸಂತ ಬಂಗೇರ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಂ, ಜಯರಾಮ ಶೆಟ್ಟಿ ಮುಂಡಾಡಿ ಗುತ್ತು ಉಪಸ್ಥಿತರಿದ್ದರು. ಜೀರ್ಣೋಧ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಯರಾಮ್ ಶೆಟ್ಟಿ ಪಡಂಗಡಿ, ಯವ ಸಮಿತಿ ಅಧ್ಯಕ್ಷ ಚಿದಾನಂದ ಇಡ್ಯ, ಮಹಿಳಾ ಸಮಿತಿ ಅಧ್ಯಕ್ಷೆ ಪುಷ್ಪಾವತಿ, ಜೀರ್ಣೋಧ್ಧಾರ ಸಮಿತಿ ಪಧಾದಿಕಾರಿಗಳು, ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್   ಸರ್ವಸದಸ್ಯರು, ಬೈಲು ಸಮಿತಿ ಅಧ್ಯಕ್ಷ, ಪಧಾದಿಕಾರಿಗಳು, ಯುವ ಸಮಿತಿ ಸದಸ್ಯರು, ಮಹಿಳಾ ಸಮಿತಿ ಸದಸ್ಯರು, ಭಕ್ತಾದಿಗಳು ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು.

ಯವ ಸಮಿತಿ ಅಧ್ಯಕ್ಷ ಚಿದಾನಂದ ಇಡ್ಯ ಸ್ವಾಗತಿಸಿ, ಶಾಂತಿರಾಜ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಧರ್ಮೋತ್ಥಾನ ಟ್ರಸ್ಟ್ ನ ಅಧ್ಯಕ್ಷ ವ್ರಷಭ ಆರಿಗ ಪರಾರಿ ಗುತ್ತು ಧನ್ಯವಾದವಿತ್ತರು

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.