ಮದುವೆ ಸಮಾರಂಭಗಳಲ್ಲಿಗೆ ಮತ್ತಷ್ಟು ಕಠಿಣ ನಿಯಮ: ಆದೇಶ ಹೊರಡಿಸಿದ ಆರೋಗ್ಯ ಸಚಿವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ರಾಜ್ಯಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು,  ಮದುವೆ ಸಮಾರಂಭಗಳಿಗೆ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮನೆ ಅಥವಾ ಛತ್ರಗಳಲ್ಲಿ ನಡೆಯುವ ಮದುವೆಗಳಿಗೆ 100 ಮಂದಿಗೆ ಮಾತ್ರ ಅವಕಾಶ ನೀಡಿದ್ದು,  ರೆಸಾರ್ಟ್ ಹಾಗೂ ಬಯಲಿನಲ್ಲಿ ಚಪ್ಪರ ಹಾಕಿ ಮಾಡುವ‌ ಮದುವೆಗಳಿಗೆ ವಧು, ವರ, ಮನೆಯವರನ್ನು ಸೇರಿ  200 ಮಂದಿಗೆ ಮಾತ್ರ ಅನುಮತಿ ಇರಲಿದೆ.

ಈ ಹಿಂದೆ ಛತ್ರಗಳಲ್ಲಿ ನಡೆಯುವ ಮದುವೆಗಳಲ್ಲಿ 200ಮಂದಿ ಪಾಲ್ಗೊಳ್ಳಬಹುದಿತ್ತು. ಅದರೀಗ ಅದನ್ನು ರಾಜ್ಯ ಸರ್ಕಾರ 100ಕ್ಕೆ ಇಳಿಸಿದ್ದು, ಹೊರಾಂಗಣದಲ್ಲಿ ನಡೆಯುವ ಮದುವೆಗಳಲ್ಲಿದ್ದ 500 ಜನಸಂಖ್ಯೆಯನ್ನು 200ಜನಕ್ಕೆ ಸೀಮಿತ ಮಾಡಲಾಗಿದೆ.

ಈ ವಿಚಾರವನ್ನು ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳ ಜೊತೆಗಿನ ಸಭೆ ಬಳಿಕ ಮಾತನಾಡಿದ ಅವರು, ಕೊರೋನಾ‌ ಕಾರಣದಿಂದ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಜನತೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.