3ನೇ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷರಾಗಿ ಡಾ. ಹೆಗ್ಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ:   ಮುಂದಿನ ಡಿಸೆಂಬರ್ 25  ಮತ್ತು 26  ರಂದು ಉಜಿರೆಯಲ್ಲಿ  ನಡೆಯಲಿರುವ ಅಖಿಲ ಭಾರತೀಯ  ಮೂರನೇ  ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಹಾಗು  ಸಮ್ಮೇಳನ ಉದ್ಘಾಟಿಸಲು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು  ಸಮ್ಮತಿ ಸೂಚಿಸಿ  ಕಾರ್ಯಕ್ರಮ ಯಶಸ್ವಿಯಾಗುವಂತೆ ಸಲಹೆ ಸೂಚನೆ  ಮಾರ್ಗದರ್ಶನ ನೀಡಲು ಸಂತೋಷದಿಂದ ಒಪ್ಪಿಕೊಂಡಿದ್ದಾರೆ .

ಅಖಿಲ ಭಾರತೀಯ ಸಾಹಿತ್ಯ ಪರಿಷತ್  ಬೆಳ್ತಂಗಡಿ ತಾಲೂಕು ಸಮಿತಿ ಆಶ್ರಯದಲ್ಲಿ ರಾಜ್ಯ ಮಟ್ಟದ ತೃತೀಯ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಮಾಲೋಚನಾ ಸಭೆಯು ಎ  .14 ರಂದು  ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆದಿದ್ದು, ಬಳಿಕ  ರಾಜ್ಯ ಪದಾಧಿಕಾರಿಗಳು ಧರ್ಮಸ್ಥಳ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ್ದರು. ಈ ವೇಳೆ  ಅವರು    ಸಮ್ಮೇಳನದ ಬಗ್ಗೆ  ಸಮಾಲೋಚನೆ ನಡೆಸಿ  ಸಮಿತಿ ಗೌರವಾಧ್ಯಕ್ಷ ಸ್ಥಾನ ವಹಿಸಿ ಸಮ್ಮೇಳನ ಉದ್ಘಾಟಿಸಲು  ಒಪ್ಪಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ  ಅ ಭಾ .ಸಾಹಿತ್ಯ ಪರಿಷತ್  ದ .ಕ. ಜಿಲ್ಲಾ ಗೌರವಾಧ್ಯಕ್ಷ ಡಾ| ಮೋಹನ ಆಳ್ವ , ರಾಜ್ಯ ಉಪಾಧ್ಯಕ್ಷ ಹರಿಪ್ರಕಾಶ್ ಕೋಣೆಮನೆ , ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ,ಅ .ಭಾ .ಸಾ .ಪರಿಷತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ ,ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ನಾರಾಯಣ  ಹಾಗು ಡಾ| ಶ್ರೀಧರ ಭಟ್  ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.