ರಸ್ತೆ ದಾಟುತ್ತಿರುವ ಸಂದರ್ಭ ಬೈಕ್ ಡಿಕ್ಕಿ: ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗುರುವಾಯನಕೆರೆಯ ಶಾರದಾನಗರ ಎಂಬಲ್ಲಿ ನಡೆದ ಘಟನೆ

ಗುರುವಾಯನಕೆರೆ: ಗುರುವಾಯನಕೆರೆಯ ಶಾರದಾ ನಗರ ಎಂಬಲ್ಲಿ ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ಮಹಿಳೆಯೋರ್ವರಿಗೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಎ.13 ರಂದು ನಡೆದಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಎ.14 ರಂದು ಮೃತಪಟ್ಟಿದ್ದಾರೆ.
ಗುರುವಾಯನಕೆರೆಯ ನಿವಾಸಿ ವಿನೋದ್ ನಾಯಕ್ ರವರ ಧರ್ಮಪತ್ನಿ ಮಂಜುಳಾ ವಿ ನಾಯಕ್ ಯಾನೆ ವಿಜಯಲಕ್ಷ್ಮೀ ನಾಯಕ್ ರವರು ಘಟನೆಯಲ್ಲಿ ಮೃತಪಟ್ಟವರಾಗಿದ್ದಾರೆ.
ಘಟನೆಯ ವಿವರ: ಎ.13 ರಂದು ರಾತ್ರಿ ಸುಮಾರು 8.00 ಗಂಟೆಯ ಸಮಯದಲ್ಲಿ ಮಂಜುಳಾ ವಿ ನಾಯಕ್ ರವರು ಗುರುವಾಯನಕೆರೆಯ ಶಾರದಾನಗರ ಎಂಬಲ್ಲಿ ರಸ್ತೆ ದಾಟುತ್ತಿರುವ ಸಂದರ್ಭ ವೇಗವಾಗಿ ಬಂದ ದ್ವಿಚಕ್ರ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಅವರು ಎ.14 ರಂದು ಸಂಜೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬೆಳ್ತಂಗಡಿ  ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.