ಬೆಳಾಲು ಪ್ರೌಢಶಾಲೆಯಲ್ಲಿ ಯುಗಾದಿ ಕವಿಗೋಷ್ಠಿ ಮತ್ತು ಅಂಬೇಡ್ಕರ್ ಜಯಂತಿ ಆಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳಾಲು : ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಯುಗಾದಿ ಹಬ್ಬ ಮತ್ತು ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯ ಅಂಗವಾಗಿ  ವಿದ್ಯಾರ್ಥಿ ಕವಿಗೋಷ್ಠಿ ಜರುಗಿತು.

ವಿದ್ಯಾರ್ಥಿನಿ ಕಾವ್ಯಶ್ರೀ ಎಂ.ಎನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಚರಣೆಯ ಮೂಲಕ ವಿಶೇಷ ದಿನಗಳ ಮಹತ್ವದ ಅರಿವಿನೊಂದಿಗೆ ಮತ್ತು ವ್ಯಕ್ತಿಯ ವ್ಯಕ್ತಿತ್ವ, ಸಾಧನೆಗಳ ಪರಿಚಯದೊಂದಿಗೆ ಅವರ ಯಶಸ್ಸಿಗೆ ಕಾರಣವಾದ ಒಳ್ಳೆಯ ಗುಣ ಹಾಗೂ ಸಾಮರ್ಥ್ಯವನ್ನು ನಾವು ರೂಢಿಸಿಕೊಳ್ಳುವಂತಾಗಬೇಕು ಎಂದು  ಅನಿಸಿಕೆ  ವ್ಯಕ್ತಪಡಿಸಿದರು.
ಕು. ಧನ್ಯ ಮತ್ತು ಪ್ರತೀಕ್ಷಾ ರವರು ಯುಗಾದಿ ಹಬ್ಬ ಹಾಗೂ ಡಾ. ಅಂಬೇಡ್ಕರ್ ಜಯಂತಿಯ ಮಹತ್ವದ ಬಗ್ಗೆ ಮಾತನಾಡಿದರು. ನಂತರ ಹತ್ತನೇ ತರಗತಿಯ ವಿದ್ಯಾರ್ಥಿಗಳಿಂದ ಯುಗಾದಿ ಬಗೆಗಿನ ಸ್ವರಚಿತ ಕವನ ವಾಚನ ಜರಗಿತು. ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಕಾರ್ತಿಕ್ ಸ್ವಾಗತಿಸಿ, ಸೂರಜ್ ವಂದಿಸಿ, ಚೇತನ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.