ನ್ಯಾಯತರ್ಫು ಗ್ರಾಮದ ವ್ಯಾಪ್ತಿಯಲ್ಲಿ ಕೋವಿಡ್ 19 ಲಸಿಕೆ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನ್ಯಾಯತರ್ಫು : ಇಲ್ಲಿಯ ನ್ಯಾಯತರ್ಫು ಗ್ರಾಮದ 45 ವರ್ಷ ಮೇಲ್ಪಟ್ಟ ಗ್ರಾಮಸ್ಥರಿಗೆ, ಕಳಿಯ ಗ್ರಾಮ ಪಂಚಾಯತು ಮತ್ತು ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಭಾಗಿತ್ವದಲ್ಲಿ ಕೋವಿಡ್ 19 ಪೇಸ್ಟಿವೆಲ್ – 15 ಲಸಿಕೆ ಕಾರ್ಯಕ್ರಮ ಎ.15 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರುಗಿತು.
ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಡಯಾನ ಸವಿತ ದೀಪ ಪ್ರಜ್ವಲಿಸುವ ಮೂಲಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕೋವಿಡ್ 19 ಲಸಿಕೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಕಳಿಯ ಗ್ರಾಮ ಪಂಚಾಯತು ಸದಸ್ಯರಾದ ವಿಜಯ ಕುಮಾರ್ ಗೌಡ, ಅಬ್ದುಲ್ ಲತಿಫ್, ಪುಷ್ಪ ಹಿರಿಯರಾದ ರವಿರಾಜ್ ಅಜ್ರಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಿರಿಯ ಆರೋಗ್ಯ ಸಹಾಯಕಿಯರಾದ ಸುನಿತಾ, ಅರ್ಚನಾ, ಆಶಾ ಕಾರ್ಯಕರ್ತೆಯವರಾದ ಶಶಿಕಲಾ, ಪೂರ್ಣಿಮಾ, ನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹಾಯಕ ಶಿಕ್ಷಕಿ ದಮಯಂತಿ, ಸಿಸಿಲ್ಯಾ ಪ್ಲೇವಿ, ನಾಳ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ, ಕಳಿಯ ಗ್ರಾಮ ಪಂಚಾಯತು ಸದಸ್ಯರು, ಸಿಬ್ಬಂದಿ ವರ್ಗದವರು ಸಹಕರಿಸಿದ್ದರು.
ಈ ಸಂದರ್ಭದಲ್ಲಿ ನ್ಯಾಯತರ್ಫು ಗ್ರಾಮದ ಗೊ‌ವಿಂದೂರು ನಿವಾಸಿ “ಸುದ್ದಿ ಪತ್ರಿಕೆ” ವಿತರಕರ ಹಿರಿಯ ಅಜ್ಜಿ ಸುಮಾರು 93 ವರ್ಷ ಪ್ರಾಯದ ದಾರು ಸಪಲ್ಯ ಅವರು ಮೊಮ್ಮಕ್ಕಳ ಸಹಾಯದೊಂದಿಗೆ ಲಸಿಕೆಯನ್ನು ಹಾಕಿಸಿಕೊಂಡರು. ಗ್ರಾಮ ಪಂಚಾಯತು ವ್ಯಾಪ್ತಿಯ 45 ವರ್ಷ ಮೇಲ್ಪಟ್ಟ ಸುಮಾರು 107 ಮಂದಿ ನಾಗರಿಕರಿಗೆ ಕೋವಿಡ್ 19 ಲಸಿಕೆಯನ್ನು ಉಚಿತವಾಗಿ ನೀಡಲಾಯಿತು.
ಲಸಿಕಾ ಕೇಂದ್ರದಲ್ಲಿ ಕೋವಿಡ್ ಪೆಸ್ಟಿವೆಲ್ -15 ನಾಮಕರಣದೊಂದಿಗೆ ಗುಲಾಬಿ (ಪಿಂಕ್)ಬಣ್ಣದ ಬಲೂನುಗಳಿಂದ ಅಲಂಕಾರ ಮಾಡಿ ಲಸಿಕ ಕೇಂದ್ರಕ್ಕೆ ನಾಗರಿಕರ ಗಮನ ಹರಿಸುವಂತೆ ಮಾಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.