ಬೆಳ್ತಂಗಡಿ ಬಸ್ ನಿರ್ವಾಹಕನ ಕರ್ತವ್ಯ ನಿರ್ವಹಣೆಗೆ ಅಡ್ಡಿ: ಇಬ್ಬರ ಮಹಿಳೆಯರ ವಿರುದ್ಧ ಎಫ್ ಐಆರ್ ದಾಖಲು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: 6ನೇ ವೇತನ ಆಯೋಗ ಜಾರಿಗಾಗಿ ಆಗ್ರಹಿಸಿ  ಕೆಎಸ್​ಆರ್​ಟಿಸಿ ನೌಕರರು ನಡೆಸುತ್ತಿರುವ ಪ್ರತಿಭಟನೆ 9ನೇ ದಿನಕ್ಕೆ ಕಾಲಿಟ್ಟಿದ್ದು , ವಿಭಿನ್ನವಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಈ ಮಧ್ಯೆ ಸಾರ್ವಜನಿಕ ಹಿತದೃಷ್ಟಿಯಿಂದ ಹಲವು ಕಡೆ ಕರ್ತವ್ಯಕ್ಕೆ ಸಾರಿಗೆ ನೌಕಕರು ಹಾಜರಾಗುತ್ತಿದ್ದು, ಅವರನ್ನು ತಡೆಗಟ್ಟುವ ಪ್ರಯತ್ನಗಳು ನಡೆಯುವುದರ ಜೊತೆಗೆ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.

ಇದೀಗ ಇಂತದೇ ಘಟನೆ ಕರಾವಳಿ ಜಿಲ್ಲೆಯಲ್ಲಿಯೂ ನಡೆದಿದ್ದು, ಮಂಗಳೂರು ಘಟಕದ ನಿರ್ವಾಹಕ ಉಮೇಶ ಕಮಲಾಪುರ ಅವರಿಗೆ ಇಬ್ಬರು ಮಹಿಳೆಯರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಪ್ರತಿಯಲ್ಲಿ ಏನೀದೆ? 

ಎ. 12ರಂದು ತಾನು ಮಧ್ಯಾಹ್ನ ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಬಸ್ಸಿನಲ್ಲಿ ಕಾರ್ಯನಿರ್ಹಿಸುತ್ತಿದ್ದ ವೇಳೆ ಬೆಳ್ತಂಗಡಿಯಲ್ಲಿ ಬಸ್ಗಿಗೆ ಹತ್ತಿದ ಇಬ್ಬರು ಅಪರಿಚಿತ ಮಹಿಳೆಯರು ಟಿಕೇಟು ತೆಗೆಯಲು ನಿರಾಕರಿಸಿದ್ದು, ಇತರರಿಗೆ ಟಿಕೇಟು ನೀಡಲು ಅಡ್ಡಿಪಡಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.  ಈ ಬಗ್ಗೆ ಬೆಳ್ತಂಗಡಿ ಟಿ.ಸಿ ಯ ಬಳಿ ಹೇಳಲು ಹೋಗಿ ಹಿಂತಿರುಗಿ ಬರುವ ವೇಳೆಗೆ ಅವರು ಬಸ್ಸಿನಿಂದ ಇಳಿದು ಹೋಗಿದ್ದರು ಎಂದು ದೂರು ನೀಡಿದ್ದಾರೆ. ಕರ್ತವ್ಯದಲ್ಲಿದ್ದ ಕಾರಣ ತಡವಾಗಿ ದೂರು ನೀಡಿರುವುದಾಗಿಯೂ ತಿಳಿಸಿದ್ದಾರೆ.

ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.