ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಯನ್ನು ಜಾರಿಗೊಳಿಸುತ್ತಿದೆ: ದ. ಕ. ಜಿ.ಕಿ.ಕಾಂ. ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ:  ಕೃಷಿ ಮಸೂದೆ ಜಾರಿಗೆ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರಾಸಾಯನಿಕ ಗೊಬ್ಬರ ಕಂಪನಿಗಳು ಇದ್ದಕ್ಕಿದ್ದಂತೆ ರಾಸಾಯನಿಕ ಗೊಬ್ಬರದ ಬೆಲೆಯನ್ನು ಏಕಾಏಕಿ 40% ಏರಿಕೆ ಮಾಡಿದ್ದು,  ಪ್ರತಿ 50 ಕೆ.ಜಿ. ಚೀಲಕ್ಕೆ 1200 ರು. ಇದ್ದ ಡಿಎಪಿ 1900 ರು. ಆಗಿದೆ. ಎನ್‌ಪಿಕೆ 10.26.26 ರಸಗೊಬ್ಬರ 1175 ರು. ಇದ್ದಿದ್ದು ಪರಿಷ್ಕೃತ ಬೆಲೆ 1775 ರು. ಆಗಿದೆ 12.32.16 ರಸಗೊಬ್ಬರ ದರ 1185 ರು. ಇದ್ದಿದ್ದು 1800 ರು. ಆಗಿದೆ. 20.20.20 ರಸಗೊಬ್ಬರ 925 ಇದ್ದಿದ್ದು 1350 ರು.ಕ್ಕೆ ಹೆಚ್ಚಳವಾಗಿದೆ. ಇದು ಇಫ್ಕೋ ಕಂಪನಿಯ ಗೊಬ್ಬರದ ದರ ಏರಿಕೆಯ ಪ್ರಮಾಣವಾಗಿದ್ದು, ಮಂಗಳೂರಿನ ಎಂಸಿಎಫ್‌ ಕಂಪನಿಯೂ ದರ ಏರಿಕೆ ಮಾಡಿ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರದ ಈ ನಡೆ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮ 0ಜ ಅಸಮಾಧನ ಹೊರಹಾಕಿದ್ದು, ಕೇಂದ್ರ ಸರ್ಕಾರ ರೈತಾಪಿ ವರ್ಗಕ್ಕೆ ವಿರುದ್ಧವಾಗಿ ನೀತಿ ನಿಯಮಗಳನ್ನು ಜಾರಿ ಮಾಡುತ್ತಿದೆ. ದೇಶದ ಮುಖ್ಯ ಆಧಾರ ಎಂದು ಬಿಂಬಿಸಲ್ಪಡುವ ಕೃಷಿಕರ ಬೆಳವಣಿಗೆಗೆ ಅಡ್ಡಗಾಲಾಗಿ ನಿಲ್ಲುತ್ತಿದ್ದು, ಅವೈಜ್ಞಾನಿಕ ಕೃಷಿ ವಿರೋಧಿ ಮಸೂದೆ ವಿರುದ್ಧ ಹೋರಾಟ ಮಾಡುತ್ತಿರುವ ಈ ಸಂದರ್ಭದಲ್ಲಿ ಮತ್ತೊಮ್ಮೆ ಅನ್ನದಾತರ ವಿರುದ್ಧವಾಗಿ ದರ ಹೆಚ್ಚಿಸಿ ಆದೇಶ ಹೊರಡಿಸಿದೆ ಎಂದು ಮೋಹನ್ ಗೌಡ ಕಲ್ಮ 0ಜ ಕೇಂದ್ರ ಸರಕಾರ ದ ರಾಸಾಯನಿಕ ಗೊಬ್ಬರ ಬೆಲೆ ಏರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ .

ಇನ್ನು ಕೇಂದ್ರದ ಆದೇಶದಂತೆ ರಾಸಾಯನಿಕ ಗೊಬ್ಬರ ಕಂಪೆನಿಗಳು ರಾಸಾಯನಿಕ ಗೊಬ್ಬರದ ಬೆಲೆಯನ್ನು ಏಕಾಏಕಿ ಶೇ. 40 ಏರಿಕೆ ಮಾಡಿವೆ. ಕೇಂದ್ರ ಸರಕಾರದ ಔಷಧ ಮತ್ತು ರಾಸಾಯನಿಕ ಗೊಬ್ಬರ ಖಾತೆ ಸಚಿವ ಸದಾನಂದಗೌಡರ ಹೇಳಿಕೆಯಂತೆ ಈಗಾಗಲೇ ಉತ್ಪಾದನೆ ಆಗಿರುವ ರಾಸಾಯನಿಕ ಗೊಬ್ಬರಗಳು  ಒಂದೂವರೆ ತಿಂಗಳವರೆಗೆ ಸಾಕಾಗುತ್ತದೆ.  ಅದನ್ನು ಹಳೆಯ ದರದಲ್ಲೇ ಮಾರಾಟ ಮಾಡಿ ಎಂದು ರಾಸಾಯನಿಕ ಗೊಬ್ಬರ ಆ ಉತ್ಪಾದನ ಕಂಪನಿಗಳಿಗೆ ಹೇಳಿದ್ದೇನೆ ಎಂದು ಹೇಳಿದ್ದಾರೆ. ಅಂದರೆ ಜೂನ್ ವರೆಗೆ ಹಳೆಯ ದರದಲ್ಲಿ ಮಾರಾಟ ಮಾಡಲು ಸೂಚಿಸಿದ್ದಾರೆ. ಅನಂತರ ಹೊಸ ದರಗಳು ಅಂದರೆ, ಈಗ 100 ರ ರೂ. ಹೆಚ್ಚಳವಾಗಿರುವ ರಾಸಾಯನಿಕ ಗೊಬ್ಬರ ಚೀಲಗಳನ್ನು ಮಾರಾಟ ಮಾಡುತ್ತೇವೆ ಎಂದು ಪರೋಕ್ಷವಾಗಿ  ಹೇಳಿದ್ದಾರೆ.

ಆದರೆ  ಮಾನ್ಯ ಸಚಿವರ ಹೇಳಿಕೆಯಂತೆ ಜೂನ್‌ ತಿಂಗಳವರೆಗೆ ಹಿಂದಿನ ದರದಲ್ಲೇ ಗೊಬ್ಬರ ಮಾರಾಟ ಮಾಡಿದ್ದರೆ ಯಾವುದೇ ಪ್ರಯೋಜನವಿಲ್ಲ. ಯಾಕೆಂದರೆ ಜೂನ್‌ ವರೆಗೆ ರಾಸಾಯನಿಕ ಗೊಬ್ಬರಗಳು ಅಲ್ಪ ಪ್ರಮಾಣದಲ್ಲಿ ಸಾಕಾಗುತ್ತವೆ. ಆ ತಿಂಗಳ ಬಳಿಕ ಕೃಷಿ ಚಟುವಟಿಕೆಗಳು ಪ್ರಾರಂಭವಾಗಲಿದ್ದು, ಜೂನ್‌ನಲ್ಲಿ ಬಿತ್ತನೆಗೆ ಅತೀ ಹೆಚ್ಚು ಬೇಕಾಗುವ ರಾಸಾಯನಿಕ ಗೊಬ್ಬರಗಳನ್ನು ಬೇರೆ ದಾರಿ ಇಲ್ಲದೆ ಒಂದು ಮೂಟೆಗೆ 700 ರೂ. ಹೆಚ್ಚಾಗಿ ಕೊಟ್ಟು ರೈತರು ಕೊಂಡುಕೊಳ್ಳಬೇಕಾದ  ಪರಿಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ರೈತರಿಗೆ ಕೇಂದ್ರ ಸರಕಾರ ಮೂರು ಕಂತುಗಳಲ್ಲಿ ಕೊಡುವ ಪಿಎಂ ಕಿಸಾನ್ ಯೋಜನೆಯ 6ಸಾವಿರ ಹಣವನ್ನು ಕೇವಲ 12 ಮೂಟೆ ರಾಸಾಯನಿಕ ಗೊಬ್ಬರ ಖರೀಸುವ ಮುಖಾಂತರ ಸರ್ಕಾರದ ಹಣವನ್ನು ಹಿಂದಿರುಗಿಸಿ ಕೊಡುತ್ತಾನೆ. ರೈತರಿಗೆ ಪಿಎಂ ಕಿಸಾನ್ ಯೋಜನೆ ಮೂಲಕ ಹಣ ಕೊಡುತ್ತೇವೆ ಎಂದುಕೊಳ್ಳುವ ಅಧಿಕಾರಶಾಹಿಗಳು ರೈತರೇ ಹೆಚ್ಚುವರಿಯಾಗಿ ಕೇಂದ್ರ ಸರಕಾರಕ್ಕೆ ಹಣ ಕೊಡುತ್ತಿದ್ದಾರೆ ಸತ್ಯವನ್ನು ಅರಿತುಕೊಳ್ಳಬೇಕು ಎಂದು ಮೋಹನ್ ಗೌಡ ಕಲ್ಮ0ಜ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.