ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ತಾಲೂಕು ಕಚೇರಿ ಎದುರು ತಟ್ಟೆ ಬಡಿದು ಪ್ರತಿಭಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ರಾಜ್ಯದ್ಯಾಂತ ಸಾರಿಗೆ ನೌಕರರ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದ್ದು, ನಾನಾ ಜಿಲ್ಲೆಗಳಲ್ಲಿ ನಿರ್ವಾಹಕರು ಹಾಗೂ ಚಾಲಕರು ವಿಭಿನ್ನ ರೀತಿಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಎ.12ರಂದು ಸಿಐಟಿಯು ನೇತೃತ್ವದಲ್ಲಿ  ಬೆಳ್ತಂಗಡಿ ತಾಲೂಕಿನ ಸಾರಿಗೆ ನೌಕರರು ಹಾಗೂ ಅವರ ಕುಟುಂಬದವರು ಸೇರಿ ಬೆಳ್ತಂಗಡಿ ಮಿನಿ ವಿಧಾನ ಸೌಧದ  ಎದುರು ತಟ್ಟೆ ಬಡಿದು ಪ್ರತಿಭಟನೆ ಮಾಡಿದ್ದು, ತಮ್ಮ ಕಷ್ಟಗಳನ್ನು ಮಾಧ್ಯಮಗಳೆದುರು ತೆರೆದಿಟ್ಟಿದ್ದಾರೆ.


ಕಳೆದ ವರ್ಷ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವುದರರೊಂದಿಗೆ ಸರ್ಕಾರಿ ಸವಲತ್ತುಗಳನ್ನು ನೀಡುವಂತೆ ಮುಷ್ಕರ ಮಾಡಿದ್ದು, ಇದೇ ವಿಷಯದ ಸಲುವಾಗಿ 2020ರ ಡಿ.10ರಿಂದ 14ರವರೆಗೆ ಮುಷ್ಕರ ನಡೆಸಿದ್ದೇವು. ಪರಿಣಾಮ ಡಿ.13ರಂದು ಸಾರಿಗೆ ಸಚಿವರು ಸೇರಿದಂತೆ ಹಲವು ಶಾಸಕರೊಂದಿಗೆ ಸಂಧಾನ ನಡೆದಿತ್ತು. ಈ ಸಭೆಯಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರೆಂದು ಘೋಷಿಸುವ ಬೇಡಿಕೆಯನ್ನು ಹೊರತುಪಡಿಸಿ ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ನಿಗದಿ ಮಾಡುವುದು ಮತ್ತು ಇತರೆ ಮುಖ್ಯ 8 ಬೇಡಿಕೆಗಳನ್ನು ಈಡೇರಿಸುವ ಲಿಖಿತ ಭರವಸೆಯನ್ನು ಸರ್ಕಾರ ನೀಡಿ ಮೂರು ತಿಂಗಳು ಕಾಲಾವಕಾಶ ತೆಗೆದುಕೊಂಡ ನಂತರ ಮುಷ್ಕರ ಅಂತ್ಯಗೊಂಡಿತ್ತು.

ಆದರೆ 3 ತಿಂಗಳು ಕಳೆದರು ಸರ್ಕಾರದ ಭರವಸೆಗಳೂ ಕಡತದಲ್ಲಿಯೇ ಬಾಕಿ ಉಳಿದಿದ್ದು, ನಾಮಕಾವಸ್ಥೆಗೆ ಮಾತ್ರ ಹಳೆಯ ಸುತ್ತೋಲೆಗಳನ್ನು ಅಲ್ಪ-ಸ್ವಲ್ಪ ಬದಲಾವಣೆ ಮಾಡಿ ಬಹುಮುಖ್ಯ ಬೇಡಿಕೆಯಾದ ಆರನೇ ವೇತನ ಆಯೋಗ ಶಿಫಾರಸ್ಸುನ್ನು ಸಾರಿಗೆ ನೌಕರರಿಗೆ ನೀಡುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಹಾಗಾಗಿ 8 ಬೇಡಿಕೆ ಈಡೇರಿಸಿದ್ದೇವೆ ಎಂದು ಸರ್ಕಾರ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದು, ಕೋವಿಡ್ ಕಾರಣ ನೀಡಿ ಸಂಬಳವನ್ನು ಸರಿಯಾಗಿ ನೀಡದೇ ಸಾರಿಗೆ ನೌಕರರನ್ನು ಹಾಗೂ ಅವರ ಕುಟುಂಬದವರನ್ನು ಕಷ್ಟದ ಸುಳಿಯಲ್ಲಿ ಸರ್ಕಾರ ಸಿಲುಕಿಸುತ್ತಿದೆ. ಮನೆಯಲ್ಲಿ ದುಡಿಯುವ ಕೈಗಳು ಸರ್ಕಾರದ ಮೊಂಡುತನದಿಂದ ಬಲ ಕಳೆದುಕೊಂಡಿದ್ದು, ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿದೆ ಎಂದು ನೌಕರರ ಪತ್ನಿ ಮಕ್ಕಳು ನೋವನ್ನು ಹೊರಹಾಕಿದ್ದಾರೆ.

ಇದೇ ವೇಳೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿಐಟಿಯು ತಾಲೂಕು ಉಪಾಧ್ಯಕ್ಷ ಶೇಖರ್ ಲಾಯಿಲ ರಾಜ್ಯ ಸರ್ಕಾರವು ಸರ್ವಾಧಿಕಾರಿ ಧೋರಣೆ ಅನುಸರಿಸುವ ಮೂಲಕ ಸಾರಿಗೆ ನೌಕರರ ಮುಷ್ಕರವನ್ನು ಹತ್ತಿಕ್ಕುವ ಸಲುವಾಗಿ ನೌಕರರ ಬಗ್ಗೆ ಅಪಪ್ರಚಾರ ನಡೆಸುತ್ತಿದೆ. ಮಾಜಿ ಸಾರಿಗೆ , ಹಾಲಿ ಕಂದಾಯ ಸಚಿವ ಆರ್ ಅಶೋಕ್ ಮತಿಭ್ರಮಣರಂತೆ ವರ್ತಿಸುತ್ತಿದ್ದಾರೆ. ಸಾರಿಗೆ ಸಂಸ್ಥೆ ಮುಳುಗುತ್ತಿರುವ ಹಡಗು ಆಗಲು ಬಿಜೆಪಿ ರಾಜ್ಯ ಸರ್ಕಾರ ಕಾರಣ ಎಂಬುದನ್ನು ಸಚಿವರೆ ಒಪ್ಪಿಕೊಂಡಂತಾಗಿದೆ.

ಏಷ್ಯಾ ಖಂಡದಲ್ಲೇ ಲಾಭದಾಯಕ ಕರ್ನಾಟಕ ರಾಜ್ಯ ಸಾರಿಗೆಯನ್ನು ಅವಮಾನಿಸಿದ ಆರ್ ಅಶೋಕ್ ತಕ್ಷಣ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಕೊರೊನಾ ನೆಪವೊಡ್ಡಿ ಪ್ರತಿಭಟನೆ ನಡೆಸದಂತೆ ನಿಷೇಧ ಹೇರಿರುವ ಜಿಲ್ಲಾಡಳಿತವು ಸಂಸದ ನಳೀನ್ ಕುಮಾರ್ ಕಟೀಲು ಅವರ ಮನೆಯಲ್ಲಿ 20 ರಿಂದ 30 ಸಾವಿರ ಜನರನ್ನು ಸೇರಿಸಿ ಧರ್ಮ ನೇಮತ್ಸೋವ ನಡೆಸಲು ಅವಕಾಶ ಮಾಡಿಕೊಟ್ಟಿದೆ ಎಂದ ಅವರು ರಾಜ್ಯದಲ್ಲಿ ಜನಪ್ರತಿನಿಧಿಗಳಿಗೊಂದು , ಜನಸಾಮಾನ್ಯರಿಗೊಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಧರ್ಮಸ್ಥಳ ಡಿಫ್ಪೋ ಅಧ್ಯಕ್ಷ ತಮ್ಮಣ್ಣ ಗೌಡ ಮಾತನಾಡಿ ರಾಜ್ಯ ಸರ್ಕಾರ ನೌಕರರ ಬೇಡಿಕೆಗಳನ್ನು ತಕ್ಷಣ ಈಡೇರಿಸುವ ಬದಲಾಗಿ ಡಿಪೋ ಮೆನೇಜರ್ ಮೂಲಕ ನೌಕರರಿಗೆ ವಿವಿಧ ರೀತಿಯ ದೌರ್ಜನ್ಯ ಎಸಗುತ್ತಿದೆ. ಸಾರಿಗೆ ನೌಕರರನ್ನು ಜೀತದಾಳುಗಳಂತೆ ದುಡಿಸುತ್ತಿರುವುದಲ್ಲದೆ ಅಂತರರಾಷ್ಟ್ರೀಯ ಕಾರ್ಮಿಕ ಕಾನೂನಿನ ವಿರುದ್ಧವಾಗಿ ದುಡಿಸಲಾಗುತ್ತದೆ ಎಂದು ಆರೋಪಿಸಿದ ಅವರು ನೌಕರರು ರಾಜ್ಯ ಸರ್ಕಾರದ, ಅಧಿಕಾರಿಗಳ ಯಾವುದೇ ಗೊಡ್ಡು ಬೆದರಿಗೆ ಬಗ್ಗಲ್ಲ . ಹೋರಾಟವನ್ನು ಹತ್ತಿಕ್ಕುವ ಸಂವಿಧಾನ ಬಾಹಿರ ಕೆಲಸಕ್ಕೆ ಕೈ ಹಾಕಿ ನಮ್ಮನ್ನು ಕೆಣಕಿದರೆ ನಾವೂ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದರು.

ಸಾರಿಗೆ ನೌಕರರು ಹಾಗೂ ಕುಟುಂಬಸ್ಥರು ತಮ್ಮ ಮಕ್ಕಳೊಂದಿಗೆ ತಹಶಿಲ್ದಾರರ ಕಚೇರಿ ಎದುರು ತಟ್ಟೆ , ಲೋಟ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದ ನೌಕರರ ಘೋಷಣೆಗಳು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಸಾರಿಗೆ ನೌಕರರ ಒಕ್ಕೂಟದ ಹೇಮಂತ್ ಕುಮಾರ್ , ಸುದರ್ಶಿನಿ , ಸಿಐಟಿಯು ಮುಖಂಡರಾದ , ನ್ಯಾಯವಾದಿ ಸುಕನ್ಯಾ ಹರಿದಾಸ್ , ನೀಲೇಶ್ ಹೆಚ್ , ಕುಸುಮ ಮಾಚಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.