ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದಿಂದ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ದ.ಕ ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಕ್ಕಿಂಜೆ ಹಾಗೂ ಸೋಮಂತಡ್ಕ ಭಿಡೆ ಮೆಡಿಕಲ್ಸ್ ಮಾಲಕ ಸುಜಿತ್ ಭಿಡೆ ಹಾಗೂ ಕಾರ್ಯದರ್ಶಿ ಮಂಗಳೂರಿನ ಕುಸುಮಾ ಮೆಡಿಕಲ್ಸ್  ಮಾಲಕ ಗುರುಚರಣ್ ರಾವ್  ಇವರುಗಳಿಗೆ ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ಉಜಿರೆಯ ದಿಶಾ ಫುಡ್ ಕಾರ್ನರ್ ನ ಮೀಟಿಂಗ್ ಹಾಲ್ ನಲ್ಲಿ ಜರುಗಿತು.

ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ನವೀನಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕು ಸಂಘದ ಕೋಶಾಧಿಕಾರಿ ಗಣಪತಿ ಭಟ್, ದ.ಕ ಜಿಲ್ಲಾ ಉಪ ಔಷಧಿ ನಿಯಂತ್ರಕರಾದ ಸುಜಿತ್ ಟಿ.ಪಿ, ಸಹಾಯಕ ಔಷಧಿ ನಿಯಂತ್ರಕ ಶಂಕರ ನಾಯಕ್  ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಸನ್ನಿಧಿ ಮೆಡಿಕಲ್ಸ್ ನ  ಅಶ್ವಿನಿ ಪ್ರಾರ್ಥಿಸಿ, ಸಂಘದ ಕಾರ್ಯದರ್ಶಿ ಹಾಗೂ ಸುರಕ್ಷಾ ಮೆಡಿಕಲ್ಸ್ ನ ಶ್ರೀಧರ ಕೆ.ವಿ  ಸ್ವಾಗತಿಸಿದರು, ಮಹಾಗಣಪತಿ ಎಂಟರ್ ಪ್ರೈಸಸ್ ನ ಮಾಲಕ  ಪ್ರಕಾಶ್  ಕಾರ್ಯಕ್ರಮ ನಿರೂಪಿಸಿ, ಬೆಳ್ತಂಗಡಿ ಗಣೇಶ್ ಮೆಡಿಕಲ್ಸ್ ಮಾಲಕ  ಮಾಧವ ಗೌಡ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.