ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘದಿಂದ ಮನವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಇಲಾಖೇತರ ಕೆಲಸಗಳನ್ನು ಅಂಗನವಾಡಿ ನೌಕರರಿಗೆ ನೀಡಬೇಡಿ: ಬಿ.ಎಂ.ಭಟ್

ಬೆಳ್ತಂಗಡಿ: ಮೊದಲೇ ಅತಿಯಾದ ಕೆಲಸದ ಒತ್ತಡದಿಂದ ಹಾಗೂ ಕನಿಷ್ಟ ವೇತನವೂ ಸಿಗದೆ ದುಡಿಯುವ ಅಂಗನವಾಡಿ ನೌಕರರನ್ನು ಜೀತದಾಳುಗಳಂತೆ ಎಲ್ಲಾ ಇಲಾಖೆಯ ಅಧಿಕಾರಿಗಳೂ ಬೇರೆ ಬೇರೆ ಕೆಲಸ ಮಾಡಲು ಹೇಳುವುದು ನಿಲ್ಲಬೇಕು. ಅಂಗನವಾಡಿ ನೌಕರರಿಗೆ ಇಲಾಖೇತರ ಕೆಲಸಗಳನ್ನು ನೀಡಬಾರದು ಎಂದು ಹಿರಿಯ ಕಾರ್ಮಿಕ ನಾಯಕ, ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು.

ಅವರು ಎ.9 ರಂದು ಬೆಳ್ತಂಗಡಿ ತಾಲೂಕು ಅಂಗನವಾಡಿ ನೌಕರರ ಸಂಘದ ವತಿಯಿಂದ ಸಿಡಿಪಿಓ ಮೂಲಕ ಸರಕಾರಕ್ಕೆ ಮನವಿ ನೀಡು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡುತ್ತಿದ್ದರು.
ಭಾಗ್ಯಲಕ್ಷ್ಮಿ ಯೋಜನೆಯ ಸಮಯಾವಕಾಶ ಕಡಿತ ಮಾಡಿದ ಸರಕಾರ ಹಿಂದೆ ಜನಿಸಿದ ಮಕ್ಕಳಿಗೂ ಸಮಯ ನೀಡಬೇಕು, ಮಿನಿ ಅಂಗನವಾಡಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರಕಾರ ಗಮನ ಹರಿಸಬೇಕು. ಅಂಗನವಾಡಿ ನೌಕರರನ್ನು ಗುಲಾಮರನ್ನಾಗಿ ಕಾಣುವ ಯಾವುದೇ ಇಲಾಖೆಯ ವಿರುದ್ದ ತೀವ್ರ ಸ್ವರೂಪದ ಹೋರಾಟ ನಡೆಸಲು ಸಂಘ ಸಿದ್ದವಿದೆ ಎಂದರು.
ನಂತರ ಸಿಡಿಪಿಓ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಗಾಯತ್ರಿ ದೇವಿ, ಸಹಕಾರ್ಯದರ್ಶಿ ಜಾನಕಿ ಸಂಘದ ಪದಾಧಿಕಾರಿಗಳು, ಕಾರ್ಮಿಕ ನಾಯಕರುಗಳಾದ ಈಶ್ವರಿ, ರಾಮಚಂದ್ರ, ಅಧಿತಿ, ಭವ್ಯ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.