ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಅರ್ನಾಲ್ಡ್ ಮಲ್ಟಿ ಜಿಮ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು: ಇಂದಿನ ಯುವಕರು ತಮ್ಮ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಉತ್ತಮ ಆರೋಗ್ಯ ಹೊಂದಿದ್ದರೆ ದೇಹಕ್ಕೆ, ಮನಸ್ಸಿಗೆ ನೆಮ್ಮದಿ ದೊರಕುವುದು ಮತ್ತು ಜಿಮ್‌ಗಳಿಗೆ ತೆರಳುವುದರಿಂದ ದುಶ್ಚಟಗಳಿಂದ ದೂರವಾಗಬಹುದು ಎಂದು ಎ.9 ರಂದು ಸೇಕ್ರೆಡ್ ಹಾರ್ಟ್ ಅರ್ನಾಲ್ಡ್ ಮಲ್ಟಿ ಜಿಮ್ ಉದ್ಘಾಟಿಸಿದ ಭಾರತದ ಮೊದಲ “ಮಿಸ್ಟರ್ ವರ್ಲ್ಡ್” ರೇಯ್ಮಂಡ್ ಡಿಸೋಜ ಹೇಳಿದರು.

ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ಸುಸಜ್ಜಿತ ಒಳಕ್ರೀಡಾಂಗಣವು ಈಗಾಗಲೇ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಬಾಸ್ಕೆಟ್ ಬಾಲ್ ಮುಂತಾದ ಸೇವೆಗಳನ್ನು ನೀಡುತ್ತಿದ್ದು ಈಗ ಮಲ್ಟಿ ಜಿಮ್ ಉದ್ಘಾಟನೆಯಾಗುವ ಮೂಲಕ ಸಂಸ್ಥೆಗೆ ಮತ್ತೊಂದು ಗರಿ ಲಭಿಸಿದೆ ಎಂದು ಸಂಸ್ಥೆಯ ಸಂಚಾಲಕರಾದ ರೆ ಫಾ ಬೇಸಿಲ್ ವಾಸ್‌ರವರು ಹೇಳಿದರು.

ಕಾರ್ಯಕ್ರಮದಲ್ಲಿ ಸೇಕ್ರೆಡ್ ಹಾರ್ಟ್ ಸಂಸ್ಥೆಯ ಪಾಲನಾ ಮಂಡಳಿಯ ಉಪಾಧ್ಯಕ್ಷ ಲಿಯೋ ರೊಡ್ರಿಗಸ್, ಪ್ರೋತ್ಸಾಹಕರಾದ ಬಿಗ್ ಬ್ರದರ್ ಲೇನ್ಸಿ ಪಿಂಟೋ, ತಾಲೂಕು ಪಂಚಾಯತ್ ಸದಸ್ಯ ಜೋಯಲ್ ಮೆಂಡೋನ್ಸ ,ಜಿಮ್ ತರಬೇತುದಾರ ಮತ್ತು ಅರ್ನಾಲ್ಡ್ ಜಿಮ್ ನ ಮಾಲೀಕರಾದ ರೋನಾಲ್ಡ್ ಡಿಸೋಜ , ರಾಷ್ಟ್ರ ಮಟ್ಟದ ಕಬಡ್ಡಿ ತೀರ್ಪುಗಾರ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಫ್ರಾನ್ಸಿಸ್ ವಿವಿ ,ಹಾಗೂ ಸಾಮಾಜಿಕ ದುರಿಣರು ಹಾಗೂ ಅತ್ಯಂತ ಖ್ಯಾತಿಯ ತೀರ್ಪುಗಾರ ಸಂಜೀವ್ ಶೆಟ್ಟಿ ಮುಗೆರೋಡಿ ,ನಿಸರ್ಗ ಸ್ಟುಡಿಯೋಸ್ ಮತ್ತು ವೀಡಿಯೊಸ್ ನ ಮಾಲೀಕ ಸುಬ್ರಹ್ಮಣ್ಯ, ಅಬ್ದುಲ್ ರಹೆಮಾನ್ ಪಡ್ಪು, ಜಿಮ್ನಲ್ಲಿ ಅಸಕ್ತಿಯಿದ್ದ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ ಜೋಸೆಫ್ ಎನ್ ಎಂ ರವರು ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು ಮತ್ತು ಗ್ರಾಮೀಣ ಮಟ್ಟದಿಂದ ಸಾಗಿ ಇಂದು ಜಿಮ್ನಲ್ಲಿ ಭಾರತದ ಮೊದಲ ಪುರುಷ ವಿಶ್ವ ವಿಜೇತರಾದ ರೇಮನ್ಡ್ ರ ಸಾಧನೆಯನ್ನು ಹೊಗಳಿದರು ಹಾಗೂ ಇನ್ನೂ ಅನೇಕ ಪ್ರತಿಭೆಗಳು ಮುಂದೆ ಇಂತಹ ಸಾಧನೆ ಮಾಡಬೇಕು ಎಂದು ಹೇಳಿದರು. ಉಪಸ್ಥಿತರಿದ್ದ ಎಲ್ಲರಿಗೂ ದೈಹಿಕ ಶಿಕ್ಷಕರಾದ ಪ್ರಕಾಶ್ ಡಿಸೋಜ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ನೆಲ್ಸನ್ ಮೋನಿಸ್ ನಿರೂಪಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.