ಆಕಸ್ಮಿಕ ವಿದ್ಯುತ್ ಅವಘಡ: ಯುವಕ ಮೃತ್ಯು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ನೆರಿಯ ಗ್ರಾಮದ ಬಯಲು ಎಂಬಲ್ಲಿ ನಡೆದ ಘಟನೆ

ನೆರಿಯ: ನೆರಿಯ ಗ್ರಾಮದ ಬಯಲು ಎಂಬಲ್ಲಿ  ಸ್ವಾಗತ ದ್ವಾರ ನಿರ್ಮಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಓರ್ವ ಯುವಕ ದಾರುಣವಾಗಿ ಮೃತಪಟ್ಟ ಘಟನೆ ಎ.9ರಂದು ರಾತ್ರಿ ನಡೆದಿದೆ.

ನೆರಿಯ ಗ್ರಾಮದ ಅಪ್ಪಿಲ ನಿವಾಸಿ ಸೋಮಪ್ಪ ಗೌಡ ರವರ ಪುತ್ರ ಉಮೇಶ( 38.ವ) ಘಟನೆಯಲ್ಲಿ ಮೃತಪಟ್ಟ ದುರ್ದೈವಿ.

ಘಟನೆಯ ವಿವರ: ನೆರಿಯ ಬಯಲು ಎಂಬಲ್ಲಿ ಯುವಕರ ತಂಡ ಸ್ವಾಗತ ದ್ವಾರ ನಿರ್ಮಿಸುತ್ತಿದ್ದು, ಈ ಸಂದರ್ಭ ದ್ವಾರದ ಮೇಲ್ಗಡೆ ಹೆಚ್‌ಪಿಸಿಎಲ್ ನೆರಿಯ ಪಂಪ್ ಹೌಸ್‌ಗೆ ಹಾದು ಹೋದ ಹೆಚ್‌ಟಿ ವಿದ್ಯುತ್ ಲೈನ್‌ಗೆ  ದ್ವಾರಕ್ಕೆ ಬಿದಿರು ಅಳವಡಿಸುವ ಸಮಯ ತಂತಿಗೆ  ಆಕಸ್ಮಿಕವಾಗಿ  ತಾಗಿ ವಿದ್ಯುತ್ ಅವಘಡ ಸಂಭವಿಸಿದೆ.

ಘಟನೆಯಿಂದ ವಿದ್ಯುತ್ ಪ್ರವಹಿಸಿ ಉಮೇಶರವರು ಗಂಭೀರಗೊಂಡಿದ್ದು, ಇವರನ್ನು  ಚಿಕಿತ್ಸೆಗಾಗಿ  ಉಜಿರೆಯ ಆಸ್ಪತ್ರೆಗೆ ಸಾಗಿಸಲಾಯಿತು.  ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.  ಮೃತ ಶರೀರವನ್ನು ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಮೇಶ್ ಗೌಡ ರವರು ಟೈಲರ್ ವೃತ್ತಿ ನಿರ್ವಹಿಸುತ್ತಿದ್ದು, ಇವರು ಕಕ್ಕಿಂಜೆ ವಲಯದ ಟೈಲರ್ ಅಸೋಸಿಯೇಷನ್  ಸಂಘದ ಸದಸ್ಯರಾಗಿದ್ದರು. ಮೃತರು ತಂದೆ ಸೋಮಪ್ಪ ಗೌಡ, ತಾಯಿ ಲಲಿತಾ, ಪತ್ನಿ ಪ್ರಮೀಳಾ, ಓರ್ವ ಪುತ್ರಿ, ಸಹೋದರ ಗಣೇಶ , ಇಬ್ಬರು ಸಹೋದರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.