ಅಳದಂಗಡಿ ಬಸದಿಗೆ ಭವ್ಯ ಮೆರವಣಿಗೆಯಲ್ಲಿ ದೇವರ ಮೂರ್ತಿಗಳು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ: ಬೆಳ್ತಂಗಡಿ ತಾಲ್ಲೂಕಿನ ಅಳದಂಗಡಿಯಲ್ಲಿ ಅರಮನೆ ಪಕ್ಕದಲ್ಲಿರುವ ಭಗವಾನ್ ಆದಿನಾಥ ಸ್ವಾಮಿ ಬಸದಿಯನ್ನು ನವೀಕರಣಗೊಳಿಸಿದ್ದು ಭಗವಾನ್ ಆದಿನಾಥ ಸ್ವಾಮಿ ಮತ್ತು ಪದ್ಮಾವತಿ ದೇವಿಯ ನೂತನ ಮೂರ್ತಿಗಳನ್ನು ಎ.8 ರಂದು ಕುತ್ಲೂರಿನಿಂದ ಅಳದಂಗಡಿ ಬಸದಿ ವರೆಗೆ ಭವ್ಯ ಮೆರವಣಿಗೆಯಲ್ಲಿ ತರಲಾಯಿತು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಬಸದಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ, ಎ. ಮಿತ್ರಸೇನ ಜೈನ್, ಮೊದಲಾದವರು ಉಪಸ್ಥಿತರಿದ್ದರು. ಊರಿನ ಹಾಗೂ ನೆರೆಕರೆಯ ಗ್ರಾಮಗಳ ಶ್ರಾವಕ, ಶ್ರಾವಕಿಯರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.