ಡಾ.ಹೆಗ್ಗಡೆಯವರಿಂದ ರುಡ್ ಸೆಟ್ ಸಂಸ್ಥೆಗಳ ವಾರ್ಷಿಕ ವರದಿ ಬಿಡುಗಡೆ

ಉಜಿರೆ: ರಾಜ್ಯದಾದ್ಯಂತ ಇರುವ ಎಲ್ಲಾ ರುಡ್‌ಸೆಟ್ ಸಂಸ್ಥೆಗಳ 2020-21 ರ ಸಾಲಿನ ವಾರ್ಷಿಕ ವರದಿಯನ್ನು ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ಅವರು ಎಲ್ಲಾ ಸಂಸ್ಥೆಗಳ ನಿರ್ದೇಶಕರುಗಳೊಂದಿಗೆ ವಿಮರ್ಶೆ ಸಭೆಯನ್ನು ನಡೆಸಿ ಒಂದು ವರ್ಷದ ಕಾರ‍್ಯ ಚಟುವಟಿಕೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

2020-21 ರ ವಾರ್ಷಿಕ ಗುರಿಯನ್ನು ತಲುಪುವಲ್ಲಿ ಸಂಸ್ಥೆಯ ಕಾರ‍್ಯ ವೈಖರಿಯನ್ನು ಶ್ಲಾಘಿಸಿ, ಮುಂದಿನ ವರ್ಷಗಳಲ್ಲೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ತಿಳಿಸಿ, ಮಹಿಳೆಯರಿಗೆ, ವಿಕಲ ಚೇತನರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹೊಸ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ  ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ರುಡ್‌ಸೆಟ್ ಸಂಸ್ಥೆ ಉಜಿರೆ ಕೇಂದ್ರ ಕಛೇರಿಯ ಪ್ರಭಾರ ಕಾರ್ಯನಿರ್ವಾಹಕ ನಿರ್ದೇಶಕ ಪಡದಯ್ಯ ಸಿ. ಹಿರೇಮಠ್ ಹಾಗೂ ಬ್ರಹ್ಮಾವರ, ಚಿತ್ರದುರ್ಗ, ಮೈಸೂರು, ಬೆಂಗಳೂರು, ವಿಜಯಪುರ ಮತ್ತು ಧಾರವಾಡದ ರುಡ್‌ಸೆಟ್ ಸಂಸ್ಥೆಗಳ ನಿರ್ದೆಶಕರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.