ಕೃಷಿಗೆ ಅತ್ಯವಶ್ಯಕವಾದ ರಸಗೊಬ್ಬರಗಳ ದರ ಹೆಚ್ಚಳ

ಬೆಳ್ತಂಗಡಿ: ದೇಶಾದ್ಯಂತ ರಸಗೊಬ್ಬರವನ್ನು ರೈತರಿಗೆ ಮಾರಾಟ ಮಾಡುವ ಇಫ್ಕೋ ಸಂಸ್ಥೆಯು ರಸಗೊಬ್ಬರಗಳ ದರಗಳನ್ನು 700 ರೂ ಹೆಚ್ಚಿಸಿ  ಆದೇಶ ಹೊರಡಿಸಿದೆ.

ದೇಶಾದ್ಯಂತ ಕೊರೊನಾ ಸಾಂಕ್ರಾಮಿಕ ರೋಗದಿಂದ ಜನರಿಗೆ ಹಾಗೂ ರೈತರಿಗೆ ಹಲವಾರು ಸಮಸ್ಯೆಗಳು ಸೃಷ್ಠಿಯಾಗಿವೆ. ಅದರಲ್ಲೂ ಪ್ರಮುಖವಾಗಿ ದೇಶದ ರೈತನ ಸ್ಥಿತಿ ಚಿಂತಾಜನಕವಾಗಿರುವಂತಹದ್ದು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಕಾಯ್ದೆಗಳನ್ನು ವಿರೋಧಿಸಿ ಒಂದು ಕಡೆ ರೈತರು ಹೋರಾಟ ಮಾಡುತ್ತಿದ್ದಾರೆ. ಮತ್ತೊಂದೆಡೆ ಇಪ್ಕೋ ಕಂಪೆನಿಯು ಕೃಷಿಗೆ ಅತ್ಯವಶ್ಯಕವಾದ ರಸಗೊಬ್ಬರಗಳ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.

ಇಪ್ಕೋ ಸಂಸ್ಥೆಯು ಹೊರಡಿಸಿರುವ ಆದೇಶದಲ್ಲಿ ಡಿಎಪಿ ಹಾಗೂ ಎನ್‌ಪಿಕೆ ಗೊಬ್ಬರಗಳ ಬೆಲೆಯನ್ನು ದುಬಾರಿಗೊಳಿಸಿದ್ದು, ಡಿಎಪಿ ಗೊಬ್ಬರದ ಬೆಲೆ 1900 ಕ್ಕೆ ನಿಗದಿ ಮಾಡಲಾಗಿದೆ. ಎನ್‌ಪಿಕೆ 10-26 ಗೊಬ್ಬರದ ದರವನ್ನು 1775 ರೂ ಗಳಿಗೆ ನಿಗದಿಗೊಳಿಸಲಾಗಿದ್ದು, ಎನ್‌ಪಿಕೆ 20-20 ಗೊಬ್ಬರದ ದರವನ್ನು 1350 ರೂ ಗಳಿಗೆ ನಿಗದಿಪಡಿಸಿದೆ, ಹಾಗೆಯೇ ಎನ್‌ಪಿಕೆ 15-15 ಗೊಬ್ಬರವನ್ನು 1500 ರೂಗಳಿಗೆ ನಿಗದಿ ಪಡಿಸಿ ಆದೇಶ ಹೊರಡಿಸಿದೆ.

ಈ ನಿಗದಿತ ದರಗಳು ಏಪ್ರೀಲ್ 1 ರಿಂದಲೇ ಜಾರಿಗೆ ಬಂದಿದ್ದು, ಹಳೆಯ ಸ್ಟಾಕ್ ಗಳನ್ನು ಹಳೆಯ ದರದಂತೆಯೇ ಮಾರಲು ಇಪ್ಕೋ ಸಂಸ್ಥೆಯು ಸೂಚನೆ ನೀಡಿದೆ. ರಸಗೊಬ್ಬರಗಳ ಬೆಲೆ ಹೆಚ್ಚಾಗಿದ್ದು, ಸರ್ಕಾರವು ಇದುವೆರಗೂ ಕೊಡುತ್ತಾ ಬಂದಿದ್ದ ಸಬ್ಸಿಡಿಯನ್ನು ಮುಂದುವರೆಸುತ್ತದೆಯೋ ಇಲ್ಲವೋ ಎಂಬುದು ಇನ್ನು ಬಹಿರಂಗಗೊಂಡಿಲ್ಲ. ರಸಗೊಬ್ಬರಗಳ ದರ ಹೆಚ್ಚಿಸಿ ಇಫ್ಕೋ ಸಂಸ್ಥೆಯ ಮಾರ್ಕೆಟಿಂಗ್ ಡೈರೆಕ್ಟರ್ ಯೋಗೇಂದ್ರ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.