ಬೆಳ್ತಂಗಡಿ: ಮಂಗಳೂರು ವಿಶ್ವವಿದ್ಯಾನಿಲಯವು ನಡೆಸಿದ 2019-20ನೇ ಸಾಲಿನ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಮಂಗಳೂರು ವಿವಿ ಯಲ್ಲಿ ವ್ಯಾಸಂಗ ಮಾಡಿದ ಫಿಯೋನಾ ಜಿ.ಡಿ ಕೋಸ್ತರವರು ಎಂ.ಕಾಂ (ಹೆಚ್. ಆರ್.ಡಿ) ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಗಳಿಸಿರುತ್ತಾರೆ.
ಇವರು ಬೆಳ್ತಂಗಡಿ ತಾಲೂಕಿನ ಚರ್ಚ್ ಹಿ.ಪ್ರಾ.ಶಾಲೆ, ಸಂತ ತೆರೇಸಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬೆಳ್ತಂಗಡಿ, ಸಂತ ಆಗ್ನೇಸ್ ಕಾಲೇಜು ಮಂಗಳೂರು ಇಲ್ಲಿ ವಿದ್ಯಾಭ್ಯಾಸ ಪಡೆದಿದ್ದು. ಪ್ರಸುತ್ತ ವಾಮಂಜೂರು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಹೆಚ್.ಆರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬದ್ಯಾರಿನ ಗ್ರೆಟ್ಟಾ ಡಿ’ಕೋಸ್ತ ಹಾಗೂ ದಿ|ಫೆಲಿಕ್ಸ್ ಡಿ’ಕೋಸ್ತ ದಂಪತಿ ಪುತ್ರಿ.