ಪದಗಳ ಶಕ್ತಿ ವರ್ಣಿಸಲು ಅಸಾಧ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪದಗಳು ಕೇವಲ ಕ್ರಮಾಗತವಾಗಿ ಜೋಡಿಸಿದ ಅಕ್ಷರಗಳ ಸಮೂಹವಷ್ಟೇ ಅಲ್ಲ. ಕೆಲವು ಸಂದರ್ಭಗಳಲ್ಲಿ ಕೆಲವು ಆಯ್ದ ಪದಗಳು ವಿಶೇಷ ಪರಿಣಾಮ ಬೀರುವ ಶಕ್ತಿಯನ್ನು ಹೊಂದಿದೆ. ಅನ್ಯರೊಡನೆ ಮಾತನಾಡುವಾಗ ಬಳಸುವ ಪದಗಳ ಬಗ್ಗೆ ನಾವು ಎಚ್ಚರ ವಹಿಸುವುದು ಅಗತ್ಯ. ಏಕೆಂದರೆ ಒಮ್ಮೆ ಆಡಿದ ಮಾತುಗಳನ್ನು ಯಾವ ಕಾರಣಕ್ಕೂ ಹಿಂದೆ ಪಡೆಯಲಾಗದು. ಅವುಗಳು ಬೀರುವ / ಬೀರಬಹುದಾದ ಪರಿಣಾಮವನ್ನೂ ಸಂಪೂರ್ಣ ನಿವಾರಿಸಲಾಗದು. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎನ್ನುವುದು.

ಈ ಕಾರಣಕ್ಕಾಗಿಯೆ. ಸ್ವಾತಂತ್ರ ಪೂರ್ವದ ದಿನಗಳಲ್ಲಿ ನಡೆದ ವಿಚಾರ. ಆತ ಓರ್ವ ಬ್ರಿಟಿಷ್ ಪ್ರಜೆ, ಕಲೆಕ್ಟರ್ ಆಗಿದ್ದವ. ಒಂದು ದಿನ ಆತ ತನ್ನ ಸೇವಕನನ್ನು ಬಳಿಗೆ ಕರೆದು ಹೀಗೆಂದ ಯಾರಾದರೂ ದೊಡ್ಡ ಸನ್ಯಾಸಿಯು ಈ ಸಮೀಪದಲ್ಲಿ ಕಂಡರೆ ನನ್ನ ಬಳಿ ತಿಳಿಸು. ಆತನಿಂದ ನಾನು ಜ್ಞಾನ ಹೊಂದ ಬಯಸುವೆ.

ಇದಾದ ನಂತರ ಅದೊಂದು ದಿನ ಓರ್ವ ಸಾಧುವು ಆ ಊರಿಗೆ ತನ್ನ ಶಿಷ್ಯರೊಡನೆ ಆಗಮಿಸಿದ. ಮಾರ್ಗದಲ್ಲಿ ಅವರೆಲ್ಲರೂ ಶ್ರೀಕೃಷ್ಣ ಪರಮಾತ್ಮನ ನಾಮಸ್ಮರಣೆ ಮಾಡುತ್ತ ರಾಧೆ ಶ್ಯಾಂ, ರಾಧೆ ಶ್ಯಾಂ, ರಾಧೆ ಶ್ಯಾಂ, ಎಂದು ರಾಗವಾಗಿ ಭಕ್ತಿಭಾವದಿಂದ ಉಚ್ಚರಿಸಿದರು. ಇವರನ್ನು ಕಂಡ ಕಲೆಕ್ಟರ್‌ನ ಸೇವಕನಿಗೆ ತನ್ನ ಮಾಲೀಕನು ಹೇಳಿದ ಮಾತುಗಳು ನೆನಪಿಗೆ ಬಂದು, ಆತ ತನ್ನ ಮಾಲೀಕನ ಬಳಿ ಬಂದು ಸಾಧುಗಳು ಆ ಊರಿಗೆ ಬಂದಿರುವ ವಿಚಾರವನ್ನು ತಿಳಿಸಿದರು. ಈ ಸುದ್ದಿ ಕೇಳಿದ ಕಲೆಕ್ಟರನು ಸೇವಕನನ್ನು ಕುರಿತು ಹೀಗೆಂದನು, ನೀನು ಈಗಲೇ ಆತನನ್ನು ಭೇಟಿ ಮಾಡಲು ಏರ್ಪಾಟು ಮಾಡು. ಜ್ಞಾನ ಪಡೆಯಲು ನಾನು ಆತನ ಬಳಿ ಬರುವೆ.

ಈಗ ಆ ಸೇವಕನು, ಸಾಧುವರ್ಯರು ಭಜನೆ ಮಾಡುತ್ತಿದ್ದ ಸ್ಥಳಕ್ಕೆ ಬಂದು, ಅಲ್ಲಿ ತನ್ನ ಒಡೆಯನು ಬಂದು ಕೂಡಲು ಎಲ್ಲ ಏರ್ಪಾಡುಗಳನ್ನೂ ಮಾಡತೊಡಗಿದನು. ಕುಳಿತುಕೊಳ್ಳಲು ಯೋಗ್ಯ ಸ್ಥಳದಲ್ಲಿ ಒಂದು ಕುರ್ಚಿ ಹಾಕಿ, ಅದರ ಮೇಲೆ ಬೆಲೆಬಾಳುವ ಕೆಂಪು ಬಟ್ಟೆ ಹೊದಿಸಿ, ಸ್ಥಳವನ್ನು ಶುಚಿಗೊಳಿಸಿದನು. ಸಾಧುವು ಸೇವಕನ ಬಳಿ ಆತ ಹೀಗೇಕೆ ಮಾಡುತ್ತಿದ್ದಾನೆಂದು ವಿಚಾರಿಸಲು, ಸೇವಕನು ಹೀಗೆಂದನು, ಇಲ್ಲಿಗೆ ಒಬ್ಬ ದೊಡ್ಡ ಮನುಷ್ಯರು ಬರುತ್ತಿದ್ದಾರೆ. ಈಗ ಸಾಧುವರ್ಯರು ನುಡಿದರು, ಅದೇನೋ ಸರಿಯೇ, ಆದರೆ ಮೊದಲು ಆ ಪೀಠವನ್ನು ತೆಗೆ, ಈಗ ಸೇವಕ ನುಡಿದ, ನಾನು ಹಾಗೆ ಮಾಡಿದ್ದಲ್ಲಿ ನೀವು ಎಂತಹ ತೊಂದರೆಗೆ ಸಿಕ್ಕಿಹಾಕಿಕೊಳ್ಳುವಿರೆಂದು ನಿಮಗೆ ತಿಳಿದಿಲ್ಲ.

ಈಗ ಸಾಧುವು ತನ್ನ ಶಿಷ್ಯರನ್ನು ಕುರಿತು ಆ ವಿಚಾರವನ್ನು ನಿರ್ಲಕ್ಷಿಸಿ ನಾಮ ಸ್ಮರಣೆಯನ್ನು ಮುಂದುವರಿಸುವಂತೆ ಸೂಚಿಸಿದರು. ಕೆಲ ಸಮಯದ ನಂತರ ಕಲೆಕ್ಟರನು ಆ ಸ್ಥಳಕ್ಕೆ ಬಂದು ನಾಮ ಸಂಕೀರ್ತನೆಯಲ್ಲಿ ಮಗ್ನರಾಗಿದ್ದ ಜನರನ್ನು ಕುರಿತು ಅವರು ಭಜನೆ ನಿಲ್ಲಿಸುವಂತೆ ಆಜ್ಞೆ ಮಾಡಿ ಹಿಂದಿ ಭಾಷೆಯಲ್ಲಿ ಹೀಗೆಂದರು” ಇತ್ತ ಗಮನಿಸಿ ನಾನು ಜ್ಞಾನ ಪಡೆಯಲು ಇಲ್ಲಿಗೆ ಬಂದಿದ್ದೇನೆ. ಈಗ ಸಾಧುವು ಅವನತ್ತ ನೋಡುತ್ತ ತಾವು ಸಹ ಹಿಂದಿ ಭಾಷೆಯಲ್ಲಿ ಹೀಗೆಂದರು “ಆಯ್ಯಾ ಹುಡುಗ ದೇವರ ನಾಮವನ್ನು ನೀನೂ ಜಪಿಸು” ಹಾಗೂ ತಮ್ಮ ಶಿಷ್ಯರಿಗೆ ಭಜನೆ ಮುಂದುವರೆಸುವಂತೆ ಸೂಚನೆ ನೀಡಿದರು.

ಇನ್ನೊಮ್ಮೆ ಕಲೆಕ್ಟರನು ಮೊದಲಿನಂತೆಯೇ ಮಾತುಗಳನ್ನು ಪುನರುಚ್ಚರಿಸಲು ಆತನಿಗೆ ಸಾಧುವಿನಿಂದ ಮೊದಲು ದೊರೆತ ಉತ್ತರವೇ ದೊರೆಯಿತು.ಮೂರನೇ ಬಾರಿಯೂ ಆತ ತನ್ನ ಮಾತುಗಳನ್ನು ಪುನರಾವರ್ತಿಸಲು ಆತನತ್ತ ದೃಷ್ಟಿ ಹಾಯಿಸಿದ ಸಾಧುವು ಹೀಗೆಂದ” ಬಾಯಿಮುಚ್ಚು ಸಾಲಾ”  ಹಿಂದಿ ಭಾಷೆಯಲ್ಲಿ ಸಾಲಾ ಎಂದರೆ ಭಾವ ಮೈದುನ ಎಂದರ್ಥ ಅದರ ಇನ್ನೊಂದು ಅರ್ಥ ಸಾಲಾ ಎಂದು ಕರೆದವನು ಹೀಗೆ ಕರೆಸಿಕೊಂಡವನ ಸೋದರಿಯನ್ನು ಇಟ್ಟುಕೊಂಡಿದ್ದನೆಂದೂ ಅರ್ಥ ನೀಡುತ್ತದೆ.  ಸಾಲಾ ಎಂದರೆ ಉತ್ತರ ಭಾರತದಲ್ಲಿ ಅತ್ಯಂತ ಕೆಟ್ಟ ಪದ.

ಇದರಿಂದ ಕೋಪಗೊಂಡ ಕಲೆಕ್ಟರನು ಪೊಲೀಸರನ್ನು ಕರೆದು ಈ ಸಾಧುವನ್ನು ಕರೆದುಕೊಂಡು ನಡೆ ಎಂದನು. ಈಗ ನಿನಗೇನಾಗಿದೆ ಎಂದು ನೋಡಿಕೋ ಒಂದು ಸಣ್ಣ ಪದ ನಿನ್ನನ್ನು ಸ್ವಯಂ ನಿಯಂತ್ರಣ ಕಳೆದುಕೊಳ್ಳುವಂತೆ ಮಾಡಿದೆ. ನೀನು ಎಂದೂ ನನ್ನ “ಸಾಲಾ” ಆಗಲು ಸಾಧ್ಯವೇ ಇಲ್ಲ. ಏಕೆಂದರೆ ನಿನಗೆ ಸಹೋದರಿಯರೇ ಇಲ್ಲ! ಒಂದು ಪದವೇ ನಿನ್ನನ್ನು ನಿಯಂತ್ರಣ ಕಳೆದುಕೊಳ್ಳುವಂತೆ ಮಾಡಿದೆ ದೇವರ ನಾಮವನ್ನೆ ಪುನ: ಪುನ: ಜಪಿಸುತ್ತಿದರೆ ಅದು ನಿನ್ನ ಮೇಲೆ ಎಂತಹ ಉತ್ತಮ ಪರಿಣಾಮ ಬೀರಬಹುದೋ ಊಹಿಸು”

ಈಗ ಬ್ರಿಟಿಷ್ ಅಧಿಕಾರಿಯು ಸ್ತಂಭೀಭೂತನಾದನು ಏಕೆಂದರೆ ಆತ ಸಾಧುವಿಗೆ ಇಂಗ್ಲೀಷ್ ಭಾಷೆ ಮಾತನಾಡಲು ಬರುವುದೆಂದು ಊಹಿಸಿರಲೂ ಇಲ್ಲ. ಅಲ್ಲದೆ ಆತನಿಗೆ ಇನ್ನೊಂದು ವಿಚಾರವೂ ಹೊಳೆಯಿತು. ಈ ಸಾಧುವಿನ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ನುಡಿದ” ಸ್ವಾಮಿ ನನಗೆ ಅಗತ್ಯವಾದ ಜ್ಞಾನ ದೊರಕಿದೆ. ತನ್ನ ಮನೆ ಹಿಂತಿರುಗಿದ ಕಲೆಕ್ಟರ್ ತನಗೆ ಸೇರಿದ್ದೆಲ್ಲವನ್ನೂ ಸೇವಕನಿಗೆ ನೀಡಿ ಆತ ತಕ್ಷಣ ಸನ್ಯಾಸ ಧೀಕ್ಷೆ ತೆಗೆದುಕೊಂಡ.

ಈ ಮೇಲೆ ಹೇಳಿದ ವಿಚಾರ ಒಂದು ಕಟ್ಟು ಕತೆಯಲ್ಲ. ಇದೊಂದು ಸತ್ಯ ಘಟನೆ ಇದರಿಂದ ತಿಳಿದು ಬರುವ ಅಂಶ ಹೀಗಿದೆ” ಪರಮಾತ್ಮನ ನಾಮ ಪವಿತ್ರವಾದುದು ನಾಮ ಜಪದಿಂದ ನಮಗೆ ಉತ್ತಮ ಪ್ರತಿಫಲಗಳೆ ದೊರೆಯುವುದು ಹಾಗೇ ಕೆಟ್ಟ ಪದಗಳನ್ನು ಬಳಸಿದರೆ ಕೆಟ್ಟ ಪರಿಣಾಮಗಳೇ ಉಂಟಾಗುವುದು. ಅನಿಷ್ಟ ಪ್ರತಿಫಲಗಳೇ ದೊರೆತಾವು.

ಪ್ರಿಯರೇ ನುಡಿಯಬೇಕಾದಲ್ಲಿ ಉತ್ತಮ ನುಡಿಗಳನ್ನೇ ನುಡಿಯಿರಿ, ಶ್ರೇಷ್ಠ ವಿಚಾರಗಳನ್ನು ಕುರಿತೇ ಮಾತನಾಡಿರಿ, ಇತರರಲ್ಲಿರುವ ಕುಂದು ಕೊರತೆಗಳನ್ನು ಎತ್ತಿ ಆಡಿಕೊಳ್ಳುವತ್ತ ಪ್ರಧಾನ್ಯತೇ ನೀಡದಿರಿ, ನಿಮ್ಮ ಮಾತುಗಳು, ವಿಚಾರಗಳು, ವಾಕ್ಯಗಳು ಜಗತ್ತಿನ ಕಲ್ಯಾಣಕ್ಕೆ ಪೂರಕವಾದುಗಳಾಗಿರಲಿ. ಪಟಪಟ ಎಂದು ನೂರಾರು ಮಾತನಾಡುವುದರ ಬದಲು ಜಗತ್ತಿನ ಕಲ್ಯಾಣಕ್ಕೆ ಕಾಣಿಕೆ ನೀಡಬಲ್ಲ ಅಥವಾ ಇತರರ ಬದುಕಿಗೆ ಸ್ಫೂರ್ತಿಯಾಗಬಲ್ಲ, ಇತರರ ಏಳಿಗೆಗೆ ಪೂರಕವಾಗಬಲ್ಲ, ಇತರರ ಬದುಕಿಗೆ ಮಾರ್ಗದರ್ಶನವಾಗಬಲ್ಲ ಉತ್ತಮ ನುಡಿಗಳನೇ ಆಡಿರಿ.

ನಿಮ್ಮ ಮಾತುಗಳು ನಿಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಉತ್ತಮ ನುಡಿಗಳು ನಿಮ್ಮ ವ್ಯಕ್ತಿತ್ವ ಗೌರವ ತರಬಲ್ಲದು ನಿಮ್ಮ ವ್ಯಕ್ತಿ ಗೌರವವನ್ನು ಹೆಚ್ಚಿಸಬಲ್ಲದು. ಹಾಗೂ ಸಮಾಜದಲ್ಲಿ ನಿಮ್ಮ ಸ್ಥಾನವನ್ನು ಎತ್ತರಕೇರಿಸಬಲ್ಲದು. ಉತ್ತಮರ ಒಡನಾಟ ಸ್ವಯಂ ನಿಯಂತ್ರಣ, ಆತ್ಮ ವಿಮರ್ಶೆ, ಸತತ ಪರಿಶ್ರಮ, ದೃಢನಿರ್ಧಾರ ಜೀವನದಲ್ಲಿ ಶ್ರೇಷ್ಠ ಗುರಿ. ನಿಮ್ಮ ಮಾತುಗಳು ಸತ್ಯ ಪೂರ್ಣವಾಗಿರಬಲ್ಲದು. ನಿಮಗೆ ಜನ ಪ್ರೀಯತೆಯನ್ನು ಗಳಿಸಬಲ್ಲದು.

 

ರಾಘವೇಂದ್ರ ಪ್ರಭು
ಕರ್ವಾಲು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.