ಪುಂಜಾಲಕಟ್ಟೆ ಕೆಪಿಎಸ್ ಪ್ರೌಢ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಸಮಯದ ಸದುಪಯೋಗ ಶೈಕ್ಷಣಿಕ ಉನ್ನತಿಗೆ ಪ್ರೇರಣೆ: ಶ್ಯಾಮಪ್ರಸಾದ್ ಸಂಪಿಗೆತ್ತಾಯ

ಪುಂಜಾಲಕಟ್ಟೆ:  ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡಾ ಹುಟ್ಟು ಪ್ರತಿಭಾನ್ವಿತ. ಆದರೆ ಅವನ ಪ್ರತಿಭೆ ಪ್ರಭೆಯಾಗಿ ಹೊರಹೊಮ್ಮಲು ಅವಕಾಶವನ್ನು ಕಲ್ಪಿಸಿಕೊಡಬೇಕಾಗಿದೆ. ಆಗ ಮಾತ್ರ ಆ ಪ್ರತಿಭೆಗೆ ಬೆಲೆ ಬರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಯದ ಸದುಪಯೋಗವನ್ನು ಶೈಕ್ಷಣಿಕ ಉನ್ನತಿಗಾಗಿ ಕೈಗೊಂಡರೆ ಸಾಧನೆಯ ಶಿಖರವನ್ನು ಏರಲು ಸಾಧ್ಯ ಎಂದು ಕರ್ನಾಟಕ ಪಬ್ಲಿಕ್‌ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ  ಶ್ಯಾಮಪ್ರಸಾದ್ ಸಂಪಿಗೆತ್ತಾಯ ಹೇಳಿದರು.
ಅವರು ಪುಂಜಾಲಕಟ್ಟ್ಟೆ ಕರ್ನಾಟಕ ಪಬ್ಲಿಕ್‌ ಸ್ಕೂಲ್ ಪ್ರೌಢಶಾಲಾ ವಿಭಾಗದ ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ  ಮಾತನಾಡಿದರು.  ಮಡಂತ್ಯಾರು  ಗ್ರಾ.ಪಂ. ಅಧ್ಯಕ್ಷೆ ಶಶಿಪ್ರಭಾ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೋರ್ವ ವಿದ್ಯಾರ್ಥಿಯು ತಮಗೆ ಸಿಕ್ಕಿದ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಿ. ಆಗ ತಮ್ಮ ಪ್ರತಿಭೆಗೊಂದು ಬೆಲೆ ಬರುತ್ತದೆ ಎಂದು ಶುಭಹಾರೈಸಿದರು.

ಗ್ರಾ.ಪಂ ಸದಸ್ಯೆ  ಪಾರ್ವತಿ, ಸಂಸ್ಥೆಯ ಪ್ರಾಂಶುಪಾಲರಾದ ಪುಷ್ಪಲತಾ ಹೆಚ್.ಡಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಕೆ., ಕ್ಷೇತ್ರ ಸಂಪನ್ಮೂಲ ವ್ಯಕ್ತಿ  ಚೇತನಾ, ವಿದ್ಯಾರ್ಥಿ ನಾಯಕ ಅಭಿಷೇಕ್, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು, ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದು ,ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪ ಪ್ರಾಂಶುಪಾಲರಾದ ಉದಯಕುಮಾರ್ ಬಿ. ಸ್ವಾಗತಿಸಿ. ಸುಧಾ ಎಸ್.ಭಟ್ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪುರಸ್ಕಾರದ ವಿವರ ವಾಚಿಸಿದರು.  ಪ್ರವೀಣ್ ಕುಮಾರ್ ದೋಟ  ಕ್ರೀಡಾಕ್ಷೇತ್ರದ ಸಾಧಕರ ವಿವರ ವಾಚಿಸಿದರು. ದತ್ತಿನಿಧಿ ಪುರಸ್ಕಾರದ ವಿದ್ಯಾರ್ಥಿಗಳ ವಿವರವನ್ನು ಶಾಂತಾ ಎಸ್. ವಾಚಿಸಿದರು.  ಧರಣೇಂದ್ರ ಕೆ ಕಾರ್ಯಕ್ರಮ ನಿರೂಪಿಸಿ,, ನಿರಂಜನ್ ಜೈನ್ ಐ ಧನ್ಯವಾದವಿತ್ತರು.
ಈ ಸಂದರ್ಭದಲ್ಲಿ ಜಿಲ್ಲೆಯ ಪ್ರಸಿದ್ಧ ಯಕ್ಷ ಕಲಾವಿದರ ಕೂಡುವಿಕೆಯಿಂದ  ಉಪಪ್ರಾಂಶುಪಾಲ  ಉದಯ ಕುಮಾರ್ ಬಿ. ರವರ ನೇತೃತ್ವದಲ್ಲಿ ‘ಪಂಚವಟಿ’ ಯಕ್ಷಗಾನ ತಾಳಮದ್ದಳೆ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.