ಬಡಕೋಡಿ-ಕಾಶಿಪಟ್ಣ ಪರಿಸರದಲ್ಲಿ ಗಾಳಿ-ಮಳೆಯ ಆರ್ಭಟ: ಮನೆಗಳಿಗೆ ಹಾನಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರೆಗುರುಳಿದ 35ಕ್ಕೂ ಹೆಚ್ಚು  ವಿದ್ಯುತ್ ಕಂಬಗಳು

ಹೊಸಂಗಡಿ: ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯ ಬಡಕೋಡಿ ಹಾಗೂ ಕಾಶಿಪಟ್ಣ ಗ್ರಾಮದಲ್ಲಿ  ಎ.7 ರಂದು ಸಂಜೆ ಸಂಜೆ ಸುರಿದ ಭಾರೀ ಮಳೆ- ಗಾಳಿಗೆ  ಹಲವು ಮನೆಗಳಿಗೆ ಹಾನಿಯುಂಟಾಗಿದ್ದು, ಸುಮಾರು 35ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದಿವೆ.

ಬಡಕೋಡಿ ಗ್ರಾಮದ ಕೀರ್ತಿಜೈನ್ ಎಂಬವರ ಮನೆಯ ಸೀಟ್‌ಔಟ್‌ನ ಸಿಮೆಂಟ್ ಶೀಟ್‌ಗಳು, ಹಂಚುಗಳು ಹಾರಿ ಹೋಗಿದ್ದು,  ಮನೆಯಲ್ಲೇ ಇವರು ಕ್ಯಾಟರಿಂಗ್ ಅಡುಗೆ ಮಾಡುತ್ತಿದ್ದ ಪಾತ್ರೆಗಳು  ಹಾಗೂ ಇನ್ನಿತರ ಅಡುಗೆ ಸಾಮಾಗ್ರಿಗಳಿಗೆ ಸಿಮೆಂಟ್ ಸೀಟ್ ಬಿದ್ದು ಅಪಾರ ಹಾನಿಯಾಗಿದೆ.

ರಾಘವೇಂದ್ರ ನಾಯ್ಕ, ಗೋಪಾಲ ಪೂಜಾರಿ ಬಡಕೋಡಿ, ರಾಘವೇಂದ್ರ ನಡ್ತಿಕಲ್ಲು ಅವರ ಮನೆಗಳಿಗೂ ಅಪಾರ ಪ್ರಮಾಣದ ಹಾನಿಯಾಗಿದೆ. ಪ್ರಶಾಂತ್ ನಡ್ತಿಕಲ್ಲು ರವರ ಮನೆ ಮೇಲೆ ವಿದ್ಯುತ್ ಕಂಬ ಉರುಳಿಬಿದ್ದು ಅಪಾರ  ನಷ್ಷವುಂಟಾಗಿದೆ. ಬಡಕೋಡಿ ಪರಿಸರದ ಹಲವು ಮನೆಗಳ ಅಡಿಕೆ ತೋಟ, ರಬ್ಬರ್ ಮರಗಳು, ಪಂಪ್‌ಶೆಡ್, ತೆಂಗಿನ ಮರಗಳೂ ಉರುಳಿ ಬಿದ್ದು ರೈತರಿಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಬಾಳೆಗಿಡಗಳು, ತರಕಾರಿ ಕೃಷಿಗಳು ನಾಶಗೊಂಡಿದ್ದು,  ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಕಾಶಿಪಟ್ಣ ಪರಿಸರದಲ್ಲಿ ಆಲಿಕಲ್ಲು ಮಳೆಯಾಗಿದೆ. ಕಾಶಿಪಟ್ಣದ ಮಸೀದಿ ಬಳಿ ಚಲಿಸುತ್ತಿದ್ದ ಖಾಸಗಿ ಬಸ್ ಮೇಲೆ ವಿದ್ಯುತ್ ಕಂಬ ಉರುಳಿ ಬೀಳುತ್ತಿದ್ದಂತೆ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ಸನ್ನು ಚರಂಡಿ ಕಡೆ ತಿರುಗಿಸಿದ್ದು, ಭಾರೀ ಅನಾಹುತವೊಂದು ಕೂದಳೆಲೆಯ ಅಂತರದಲ್ಲಿ ತಪ್ಪಿದಂತಾಗಿದೆ.

ಸ್ಥಳಕ್ಕೆ ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಕರುಣಾಕರ್, ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಪಂ., ಗ್ರಾ.ಪಂ. ಸದಸ್ಯರು, ಸ್ಥಳೀಯ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೆಸ್ಕಾಂ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಕುತ್ಲೂರು ವೀರಬೆ ಮನೆ ತಿಮ್ಮಪ್ಪ ಪೂಜಾರಿ ಯವರ ತೋಟಕ್ಕೆ ಸಿಡಿಲು ಬಡಿದು 70ಕ್ಕೂ ಅಧಿಕ ಅಡಿಕೆ ಗಿಡಗಳಿಗೆ ಹಾನಿಯಾಗಿದೆ. ಈ ಸಂದರ್ಭದಲ್ಲಿ ಅವರ  ಪುತ್ರ ನವೀನ್ ಪೂಜಾರಿಯವರು ಮನೆಯಲ್ಲಿ ಕಂಪ್ಯೂಟರ್ ಕೆಲಸ ನಿರ್ವಹಿಸುತ್ತಿದ್ದು,  ಸಿಡಿಲಿನ ಪ್ರಭಾವದಿಂದ ಗಾಯಗೊಂಡು ಕಾರ್ಕಳ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.