ಬೆಳ್ತಂಗಡಿ: ಕೆಎಸ್ಆರ್ಟಿಸಿ ನೌಕರರು 6ನೇ ವೇತನ ಆಯೋಗ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ. ಈ ಹಿನ್ನಲೆ ಇಂದು ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದ್ದು, ಸರ್ಕಾರಿ ಬಸ್ ಗಳು ರಸ್ತೆಗಿಳಿದಿಲ್ಲ.
ಆದರೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಸ್ ಬಂದ್ ಅಷ್ಟಾಗಿ ತಟ್ಟಿಲ್ಲ. ಉಭಯ ಜಿಲ್ಲೆಗಳಲ್ಲಿ ಪ್ರಯಾಣಿಕರು ಸರ್ಕಾರಿ ಬಸ್ ಗಳಿಗಿಂತ, ಖಾಸಗಿ ಬಸ್ ಗಳನ್ನೇ ಹೆಚ್ಚಾಗಿ ಅವಲಂಬಿಸಿರುವ ಕಾರಣ ಜಿಲ್ಲೆಯಲ್ಲಿ ಓಡಾಡುವವರಿಗೆ ಬಸ್ ಬಂದ್ ಹೆಚ್ಚಿನ ಪರಿಣಾಮ ಬೀರಿಲ್ಲ.
ಇನ್ನು ಬಸ್ ಚಾಲಕ ನಿರ್ವಾಹಕರು ಕೆಲಸಕ್ಕೆ ಬಾರದ ಕಾರಣ ಬಸ್ ಸಂಚಾರವಿಲ್ಲದೇ ಮಂಗಳೂರು ಕೆಎಸ್ಆರ್ಟಿಸಿ ಖಾಲಿ ಹೊಡೆಯುತ್ತಿದ್ದು, ಬೆಳ್ತಂಗಡಿ ತಾಲೂಕಿನಲ್ಲಿಯೂ ಕೆಎಸ್ಆರ್ಟಿಸಿ ಬಸ್ ಗಳು ರಸ್ತೆಗಿಳಿಯದ ಕಾರಣ ಸಾರ್ವಜನಿಕರು ಖಾಸಗಿ ವಾಹನಗಳು, ಬಸ್ಗಳು, ಆಟೋರಿಕ್ಷಾಗಳು ಸಾರ್ವಜನಿಕರ ಸಂಚಾರಕ್ಕೆ ನೆರವಾಗಿವೆ. ಹಾಗಾಗಿ ರಾಜ್ಯಾದ್ಯಂತ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರದ ತಾಲೂಕಿನ ಬೀರಿಲ್ಲ ಎಂದು ಹೇಳಲಾಗುತ್ತಿದೆ.