ರೋಟರಿ ಕ್ಲಬ್ ವತಿಯಿಂದ ಕೊಕ್ರಾಡಿ ಪ್ರೌಢಶಾಲೆಗೆ ಸ್ಮಾರ್ಟ್ ಟಿವಿ ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಕ್ರಾಡಿ: ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ‘ಯು ಟೀಚ್’ ಕಾರ್ಯಕ್ರಮದ ಅಡಿಯಲ್ಲಿ ಕೊಕ್ರಾಡಿಯ ಸರಕಾರಿ ಪ್ರೌಢಶಾಲೆಗೆ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಕಾರಿಯಾಗಲು ಸ್ಮಾರ್ಟ್ ಟಿ.ವಿ.ಖರೀದಿಗಾಗಿ ರೂ. 40000/- ಸಹಾಯಧನವನ್ನು ಹಸ್ತಾಂತರಿಸಲಾಯಿತು.
ಪ್ರಾಯೋಜಕರಾದ ಶ್ರೀಕೃಷ್ಣ ಪಡುವೆಟ್ನಾಯ ಪ್ರತಿಷ್ಠಾನದ ಹಾಗೂ ರೋಟರಿ ಕ್ಲಬ್ ಮಾಜಿ ಸದಸ್ಯ ಶ್ರೀಧರ ಪಡುವೆಟ್ನಾಯ ರವರು ರೋಟರಿ ಕ್ಲಬ್ ಮೂಲಕ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸಹಾಯಧನದ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ಟೀಚ್‌ನ ಚೇರ್ಮನ್ ಡಿ.ಎಂ.ಗೌಡ, ಪೂರ್ವಾಧ್ಯಕ್ಷರಾದ ಡಾ| ಶಶಿಧರ ಡೋಂಗ್ರೆ, ಕೋಶಾಧಿಕಾರಿ ಮಿಥುನ್ ಮಾಡ್ತಾ, ಕಾರ್ಯದರ್ಶಿ ಶ್ರೀಧರ ಕೆ.ವಿ, ಆನ್ಸ್ ಕ್ಲಬ್ ಅಧ್ಯಕ್ಷೆ ಡಾ| ದೀಪಾಲಿ ಡೋಂಗ್ರೆ, ಸದಸ್ಯರಾದ ರಾಜಶ್ರೀ ರಾವ್ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.