ಬೆಳ್ತಂಗಡಿ ಯಲ್ಲಿ ಡಾ. ಡೆಂಜಿಲ್ ನೊರೊನ್ಹಾ ರವರ ದಿವ್ಯಜ್ಯೋತಿ ಕ್ಲಿನಿಕ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಇಲ್ಲಿಯ ಮಂಜುನಾಥ ಕಾಂಪ್ಲೆಕ್ಸ್ ನಲ್ಲಿ ಏ. 4 ರಂದು ಡಾ. ಡೆಂಜಿಲ್ ಮತ್ತು ಡಾ. ಕಾಜಲ್ ರವರ ಕ್ಲಿನಿಕ್ ದಿವ್ಯ ಜ್ಯೋತಿ ಕ್ಲಿನಿಕ್ ಶುಭಾರಂಭ ಗೊಂಡಿತು. ಡಾ. ಡೆಂಜಿಲ್ ನೊರೊನ್ಹಾ ರವರ ಮಾತಾ- ಪಿತರು ಉದ್ಘಾಟಿಸಿದರು. ನಾರಾವಿ ಚರ್ಚ್ ಧರ್ಮಗುರುಗಳಾದ ವಂ. ಫಾ. ಸೈ ಮನ್ ಡಿಸೋಜಾ ಆಶೀರ್ವಚನ ನೆರವೇರಿಸಿ ಮಾತನಾಡಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ ಬದ್ಯಾರ್ ಅಂದರೆ ಡಾ. ಡೆನ್ಜ್ಸಿಲ್ , ಡಾ. ಡೆನ್ಜ್ಸಿಲ್ ಅಂದರೆ ಬದ್ಯಾರ್ ಆಗಿತ್ತು. ಇದೀಗ ಇಲ್ಲಿ ಅವರ ಸೇವೆ ದೊರೆಯಲಿದೆ. ಬೆಳ್ತಂಗಡಿಯಲ್ಲಿಯೂ ಇವರ ಸೇವೆ ಸದಾ ಲಭ್ಯವಾಗಲಿ. ಮತ್ತು ದೊಡ್ಡ ಆಸ್ಪತ್ರೆ ಸ್ಥಾಪನೆಯಾಗಿ ಸಾವಿರಾರು ಮಂದಿಗೆ ಉದ್ಯೋಗ ದೊರೆಯುವಂತಾಗಲಿ ಎಂದು ಹಾರೈಸಿದರು. ಬೆನಕ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಗೋಪಾಲ ಕೃಷ್ಣ ಭಟ್ ಮಾತನಾಡಿ ಇವರು ಒಬ್ಬ ವೈದ್ಯರಾಗಿ ಮಾತ್ರ ಸೇವೆ ಸಲ್ಲಿಸದೆ ಪ್ರತಿಯೋರ್ವ ರೋಗಿಯನ್ನು ಪ್ರೀತಿಯಿಂದ ಕಂಡವರು. ಇವರ ನಿರಂತರ ಸೇವೆಯೊಂದಿಗೆ ಇವರ ಆರೋಗ್ಯದ ಸಮಸ್ಯೆ ಇದ್ದರೂ ಡಾ. ಡೆನ್ಜ್ಸಿಲ್ ರವರು ಇತರರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರು. ವೇದಿಕೆಯಲ್ಲಿ ಉಜಿರೆ ಮಲ್ಟಿ ಸ್ಪೆಷ್ಯಾಲಿಟಿ ಕ್ಲಿನಿಕ್ ನ ಡಾ. ಅಶ್ವಿನ್ ಉದ್ಯಾವರ್ ಉಪಸ್ಥಿತರಿದ್ದರು. ವೀನಾ ಪಾಯ್ಸ್ ಕಾರ್ಯಕ್ರಮ ನಿರೂಪಿಸಿ, ಡಾ. ಕಾಜಲ್ ಸ್ವಾಗತಿಸಿದರು. ಡಾ. ಡೆನ್ಜ್ಸಿಲ್ ನೊರೊನ್ಹಾ ವಂದಿಸಿದರು.

ಈ ಸಂದರ್ಭ ಬದ್ಯಾರ್ ಚರ್ಚ್ ಧರ್ಮ ಗುರು ಫಾ. ಮೆಲ್ವಿನ್, ಬದ್ಯಾರ್ ಆಸ್ಪತ್ರೆಯ ಆಡಳಿತಾಧಿಕಾರಿ ಸಿ| ಪ್ರೇಮಲತಾ, ಬದ್ಯಾರ್ ಕೊನ್ವೆಂಟ್ ಸುಪೀರಿಯರ್, ತಾಲೂಕ್ ವೈದ್ಯಾಧಿಕಾರೀ ಅಸೋಸಿಯೇಷನ್ ಅಧ್ಯಕ್ಷ ಡಾ. ಶಶಿಧರ್ ಡೋಂಗ್ರೆ, ಕಾರ್ಯಧರ್ಶಿ ವಿಶ್ವ ವಿಜೇತ್, ಡಾ. ತುಲುಪುಳೆ, ಡಾ. ಜಗನಾಥ್, ಡಾ. ಭಾರತಿ, ಡಾ. ರೂಪಲತಾ, ಡಾ. ಶಶಿಕಾಂತ್ ಡೋಂಗ್ರೆ, ಡಾ. ಅಂಕಿತ, ಡಾ. ರಂಜನ್ ಡಾ. ಸೋಹನ್ ಕುಮಾರ್, ಬೆಳ್ತಂಗಡಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಎಲೋಸಿಯಸ್ ಲೋಬೊ, ಡಾ. ಗ್ರೆಟ್ಟಾ ಟಿ. ಲೋಬೊ, ಬೆಂಗಳೂರು ಕ್ರಿಮಿನಲ್ ವಕೀಲರಾದ ಅಮರ್ ಕೊರೆಯ, ಟಿವಿಎಸ್ ಮೋಟಾರ್ಸ್ ಮಾಲಕ ರೊನಾಲ್ಡ್ ಲೋಬೊ, ಕಟ್ಟಡ ಮಾಲಕ ರಾಮದಾಸ್ ಪೈ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.