ಬೆಳ್ತಂಗಡಿ: ನೆರಿಯಾ ಗ್ರಾಮದ ಅಣಿಯೂರುನಿಂದ ಕಾಟಾಜೆ. ವರ್ಪಳ ಪ್ರದೇಶಗಳಿಗೆ ರೂ 4 ಕೋಟಿ ಅನುದಾನದಲ್ಲಿ ರಸ್ತೆ ಕಾಂಕ್ರೀಟ್ ಕರಣ ಕ್ಕೆ ಎಪ್ರಿಲ್ 4ರಂದು ಶಾಸಕ ಹರೀಶ್ ಪೂಂಜಾ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾಟಿಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣಕುಮಾರ್. ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ. ಕಾರ್ಯಧ್ಯಕ್ಷ ಸತೀಶ್ ಗೌಡ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯದೇವ. ಕಾರ್ಯದರ್ಶಿ ಯೋಗರಾಜ ಹಾಗೂ ಎಲ್ಲಾ ಪದಾಧಿಕಾರಿಗಳು. ನೆರಿಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಕುಶಲ. ಪ್ರೇಮ್ ಪಂಚಾಯತ್ ಸದಸ್ಯರಾದ ಹರೀಶ್ ಗೌಡ ಶ್ರೀಮತಿ ಸವಿತಾ ಜಯದೇವ್. ನೆರಿಯಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು