ಬೆಳ್ತಂಗಡಿ ಸಂಚಾರಿ ಠಾಣಾ ಎಸ್‌ಐ ಆಗಿ ಓಡಿಯಪ್ಪ ಗೌಡ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ಸಂಚಾರಿ ಠಾಣಾ ಸಬ್ ಇನ್ಸ್‌ಪೆಕ್ಟರ್ ಆಗಿ ಓಡಿಯಪ್ಪ ಗೌಡ ರವರು ನಿಯುಕ್ತಿಗೊಂಡಿದ್ದಾರೆ.
ಓಡಿಯಪ್ಪ ರವರು ಪುಂಜಾಲಕಟ್ಟೆ ಠಾಣಾ ಅಪರಾಧ ವಿಭಾಗದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಅವರನ್ನು ಬೆಳ್ತಂಗಡಿ ಸಂಚಾರಿ ಠಾಣಾ ಸಬ್ ಇನ್ಸ್‌ಪೆಕ್ಟರ್ ಆಗಿ ನಿಯುಕ್ತಿಗೊಳಿಸಿ, ಮಂಗಳೂರು ಪಶ್ಚಿಮವಲಯ ಪೊಲೀಸ್ ಮಹಾ ನಿರೀಕ್ಷಕಿ ದೇವಜ್ಯೋತಿ ರೇ ರವರು ಆದೇಶ ನೀಡಿದ್ದಾರೆ.
ಅವಿಭಜಿತ ದ. ಕ ಉಡುಪಿ ಜಿಲ್ಲೆ ಸಂಯುಕ್ತವಾಗಿರುವ ವೇಳೆ ಕಾರ್ಕಳ ಮತ್ತು ಉಡುಪಿಯಲ್ಲಿ ಕಾನ್ಸ್‌ಟೇಬಲ್ ಆಗಿ ಪೊಲೀಸ್ ಇಲಾಖೆ ಕರ್ತವ್ಯಕ್ಕೆ ಸೇರಿದ ಅವರು ಮೂಡಬಿದ್ರೆ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು, ಕಳಸ, ಚಿಕ್ಕಮಗಳೂರು ಇತ್ಯಾದಿ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿರುವ ವೇಳೆ ಎಎಸ್‌ಐ ಆಗಿ ಪದೋನ್ನತಿ ಹೊಂದಿದ್ದರೆ, ಬಳಿಕ ವೇಣೂರು ಠಾಣೆಯಿಂದ ಎಸ್‌ಐ ಆಗಿ ಪದೋನ್ನತಿ ಹೊಂದಿದ್ದಾರೆ. ವಿಧಾನ ಸಭೆ ಮತ್ತು ಲೋಕ ಸಭೆ ಚುನಾವಣೆ ಸಮಯ ಕಳಸ ಮತ್ತು ಚಿಕ್ಕಮಗಳೂರು ಠಾಣೆಗಳಲ್ಲಿ ಎಸ್‌ಐ ಆಗಿ ಕರ್ತವ್ಯ ಸಲ್ಲಿಸಿ, ಬಳಿಕ ಮತ್ತೆ ಟ್ರಾಫಿಕ್ ಎಸ್.ಐ ಆಗಿ ಬೆಳ್ತಂಗಡಿಯಲ್ಲೇ ಕರ್ತವ್ಯದಲ್ಲಿ ಮುಂದುವರಿದಿದ್ದರು. ನಂತರ ಧರ್ಮಸ್ಥಳ ಎಸ್.ಐ ಕರ್ತವ್ಯ ನಿರ್ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.