ಬೆಳ್ತಂಗಡಿ: ಇಂದು 42 ಡಿಗ್ರಿ ಸೆಲ್ಸಿಯಸ್‌ ದಾಟಲಿರುವ ತಾಪಮಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕಾದು ಕಾವಲಿಯಂತಾದ ರಸ್ತೆಗಳು, ಬೆಂಕಿಯ ಕೆನ್ನಾಲಿಗೆಯಂತೆ ಮುಖಕ್ಕೆ ರಾಚುವ ಬಿಸಿಲು,  ಚರ್ಮ ಸುಡುವಷ್ಟು ತೀವ್ರತೆಯ ಉಷ್ಣಗಾಳಿ, ಬಿಸಿಲಿನ ಝಳದಿಂದ ಮನೆಯಿಂದ ಹೊರಬರಲು ಭಯಪಡುತ್ತಿರುವ ಜನರು.. ಕಳೆದ ಒಂದು ವಾರದಿಂದ ನಗರದ ಜನತೆ ಬಿಸಿಲಿನ ಉಗ್ರ ಸ್ವರೂಪದಿಂದ ತತ್ತರಿಸಿ ಹೋಗಿದ್ದಾರೆ.

ಹೌದು ಈ ಬಾರಿಯ  ಉಷ್ಣಾಂಶದಲ್ಲಿ ಏರಿಕೆ ಆಗಿದ್ದು, ಹೀಗಾಗಿ ವರ್ಷದಿಂದ ವರ್ಷಕ್ಕೆ ಬಿಸಿಲಿನ ತೀವ್ರತೆ ಹೆಚ್ಚು ತಟ್ಟುತ್ತಿದೆ. ಅಲ್ಲದೇ ನಗರದಲ್ಲಿ ಜಲಮೂಲಗಳು ಬತ್ತಿ ಹೋಗುತ್ತಿರುವ ತೇವಾಂಶ ಉತ್ಪತ್ತಿ ಆಗುತ್ತಿಲ್ಲ. ಹೀಗಾಗಿ ನಗರದಲ್ಲಿ ಬಿಸಿಲ ಧಗೆಯ ಜತೆಗೆ ಒಣ ಹವೆ ಕೂಡ ಹೆಚ್ಚಿದ್ದು, ಬಿಸಿಲ ಧಗೆಯ ಜತೆಗೆ ಒಣ ಹವೆ ಇರುವುದರಿಂದ ರಾತ್ರಿ ವಿಪರೀತ ಸೆಕೆಯ ಅನುಭವಾಗುತ್ತಿದೆ.

ಇನ್ನೂ ಇಂದು ಮಧ್ಯಾಹ್ನಾ ಬಿಸಿಲಿನ ಖಾವು ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ಳಲಿದ್ದು, ಸುಮಾರು 42 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಲಿದೆ ಎಂಬ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡಿದೆ.

 

 

 

About The Author

Related posts

1 Comment

Leave a Reply

Your email address will not be published. Required fields are marked *

Copy Protected by Chetan's WP-Copyprotect.