ರಾಷ್ಟ್ರೀಯ ಜೂನಿಯರ್ ಕಬ್ಬಡ್ಡಿ ಪಂದ್ಯಾಟ: ಕರ್ನಾಟಕ ತಂಡದ ನಾಯಕಿಯಾಗಿ ಉಜಿರೆಯ ಅರ್ಚನಾ ಗೌಡ ಆಯ್ಕೆ

ಉಜಿರೆ: ತೆಲಂಗಾಣದಲ್ಲಿ ಆರಂಭವಾಗಲಿರುವ ರಾಷ್ಟ್ರೀಯ ಜೂನಿಯರ್ ಕಬ್ಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ತಂಡದ ನಾಯಕಿಯಾಗಿ ಉಜಿರೆ ಅರ್ಚನಾ ಗೌಡ ಆಯ್ಕೆಯಾಗಿದ್ದಾರೆ.
ಇವರು 6 ಬಾರಿ ರಾಷ್ಟ್ರಮಟ್ಟದ ಕಬ್ಬಡ್ಡಿ ಪಂದ್ಯಾಟದಲ್ಲಿ ಸ್ಪರ್ಧಿಸಿದ ಅನುಭವಿಯಾಗಿದ್ದಾರೆ. ಇವರು ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದು, ಪ್ರಸ್ತುತ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರು ಉಜಿರೆ ಗ್ರಾಮದ ಗುರಿಪಳ್ಳ ನಿವಾಸಿ ಸದಾಶಿವ ಗೌಡ ಮತ್ತು ಶೀಲಾವತಿ ದಂಪತಿ ಪುತ್ರಿ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.