ನೆರಿಯ ಹಾಲು ಉತ್ಪಾದಕರ ಸಹಕಾರ ಸಂಘ: ಅಧ್ಯಕ್ಷರಾಗಿ ಗೋಪಾಲಕೃಷ್ಣ, ಉಪಾಧ್ಯಕ್ಷರಾಗಿ ದಯಾನಂದ ಗೌಡ ಆಯ್ಕೆ

ನೆರಿಯ: ನೆರಿಯ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಗೋಪಾಲಕೃಷ್ಣ ಸಿ.ಕೆ, ಉಪಾಧ್ಯಕ್ಷರಾಗಿ ದಯಾನಂದ ಗೌಡ ಆಯ್ಕೆಯಾಗಿದ್ದಾರೆ.

ಮಾ.22 ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಉಳಿದಂತೆ ನಿರ್ದೇಶಕರುಗಳಾಗಿ ಕಮಲಾಕ್ಷ, ಎಂ ಬಾಲಕೃಷ್ಣ ಗೌಡ, ಶೀನಪ್ಪ ಗೌಡ, ವೆಂಕಪ್ಪ ಗೌಡ, ಸ್ಮಿತಾ, ಗೀತಾ, ಲೀಲಾಧರ ಎ.ಎಸ್, ಪಿ.ಎಸ್ ಶೋಭಾ, ಎಜೆ ಜಾರ್ಜ್, ದೇವಕಿ, ವಿಮಲ ಇವರುಗಳು ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿ ಶ್ರೀಮತಿ ಸುಕನ್ಯಾ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಕಾರ್ಯದರ್ಶಿ ಬಿ.ಎಂ. ಶರೀಫ್ ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.