ವೇಣೂರು-ಆರಂಬೋಡಿ ಗ್ರಾ.ಪಂ. ಚುನಾವಣೆ: 36 ಸ್ಥಾನಗಳಿಗೆ 82 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಎರಡು ಗ್ರಾ.ಪಂ.ಗಳ ಚುನಾಯಿತ ಪ್ರತಿನಿಧಿಗಳ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗೆ ಮಾ.29ರಂದು ಚುನಾವಣೆ ನಡೆಯಲಿದ್ದು, ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಹಿನ್ನಲೆ ಎರಡು ಗ್ರಾ.ಪಂ.ನ ಒಟ್ಟು 36 ಸ್ಥಾನಗಳಿಗೆ 82 ಮಂದಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ.

ವೇಣೂರು ಗ್ರಾ.ಪಂ.ನ ವೇಣೂರು ಗ್ರಾಮದಲ್ಲಿ 20 ಮಂದಿ, ಬಜಿರೆ ಗ್ರಾಮದಲ್ಲಿ 14 ಮಂದಿ, ಕರಿಮಣೇಲು ಗ್ರಾಮದಲ್ಲಿ 12 ಮಂದಿ ಹಾಗೂ ಮೂಡುಕೋಡಿ ಗ್ರಾಮದಲ್ಲಿ 12 ಮಂದಿ ಒಟ್ಟು 24 ಸ್ಥಾನಗಳಿಗೆ 58 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಆರಂಬೋಡಿ ಗ್ರಾ.ಪಂ.ನ ಆರಂಬೋಡಿ ಗ್ರಾಮದಲ್ಲಿ 16 ಮಂದಿ ಹಾಗೂ ಗುಂಡೂರಿ ಗ್ರಾಮದಲ್ಲಿ 8 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 12 ಸದಸ್ಯ ಸ್ಥಾನಗಳಿರುವ ಆರಂಬೋಡಿ ಗ್ರಾ.ಪಂ.ಗೆ 24 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯಾಗಿದೆ.

ಮಾ.20ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮಾ.22ರಂದು ನಾಮಪತ್ರವನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಅಂದು ಸ್ಪರ್ಧಾಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ಸ್ಪಷ್ಟ ಮಾಹಿತಿ ದೊರೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.