ಉಜಿರೆಯಲ್ಲಿ ಜಿಲ್ಲಾ ಮಟ್ಟದ ಪಿಯುಸಿ ಬಾಲಕ -ಬಾಲಕಿಯರ ವಾಲಿಬಾಲ್ ಪಂದ್ಯಾಟ

ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಔದ್ಯೋಗಿಕ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ: ಶಶಿಧರ ಶೆಟ್ಟಿ

ಉಜಿರೆ: ಇತ್ತೀಚಿನ ದಿನಗಳಲ್ಲಿ ವಾಲಿಬಾಲ್ ಆಟಕ್ಕೆ ನಮ್ಮ ದೇಶದಲ್ಲಿ ಉತ್ತಮ ಪ್ರೋತ್ಸಾಹ ಲಭಿಸುವುದಲ್ಲದೇ, ಒಳ್ಳೆಯ ಸ್ಥಾನವನ್ನೂ ಗಳಿಸುತ್ತಿದೆ. ಜೊತೆಗೆ ಕ್ರೀಡೆಗೆ ನಮ್ಮ ದೇಶದಲ್ಲಿ ಒಳ್ಳೆಯ ಪ್ರೋತ್ಸಾಹ ದೊರೆಯುತ್ತಿದ್ದು, ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಮುಖ್ಯವಾಗಿ ಔದ್ಯೋಗಿಕ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ಲಭಿಸುತ್ತಿವೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ ಹೇಳಿದರು.

ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಮಂಗಳೂರಿನ ದ.ಕ. ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಉಜಿರೆ ಎಸ್.ಡಿ.ಎಂ.ಪಿ.ಯು ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ದ.ಕ ಜಿಲ್ಲಾ ಮಟ್ಟದ ಪಿಯುಸಿ. ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಸ್.ಡಿ.ಎಂ. ಪಿ.ಯು. ಕಾಲೇಜು ಪ್ರಾಂಶುಪಾಲ ಪ್ರೊ. ದಿನೇಶ್ ಚೌಟ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಕ್ರೀಡಾ ಸ್ಪೂರ್ತಿಯಿಂದ ಕ್ರೀಡಾಪಟುಗಳು ಆಗಮಿಸಿದ್ದು, ಎಲ್ಲರಿಗೂ ಈ ಕ್ರೀಡಾಕೂಟ ಸ್ಮರಣೀಯ ಕ್ರೀಡಾಕೂಟವಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಹೆಚ್, ಕ್ರೀಡಾರ್ತಿಗಳು ಉಪಸ್ಥಿತರಿದ್ದರು. ಕಾಲೇಜು ಉಪ ಪ್ರಾಂಶುಪಾಲ ಪ್ರಮೋದ್ ಕುಮಾರ್ ಸ್ವಾಗತಿಸಿ,  ದೈಹಿಕ ಶಿಕ್ಷಣ ಶಿಕ್ಷಕ ಸಂದೇಶ್ ಪೂಂಜ ವಂದಿಸಿ, ಉಪನ್ಯಾಸಕ ಮಹಾವೀರ ಜೈನ್ ನಿರೂಪಿಸಿದರು.

ವಾಲಿಬಾಲ್ ಪಂದ್ಯಾಟದ ಫಲಿತಾಂಶ
ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ: ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿದ ಎಸ್.ಡಿ.ಎಂ ಪಿ.ಯು ಕಾಲೇಜು ಉಜಿರೆ, ದ್ವಿತೀಯ ಸ್ಥಾನ : ಮೂಡಬಿದ್ರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜು ಮೂಡಬಿದಿರೆ

ವೈಯಕ್ತಿಕ ಪ್ರಶಸ್ತಿ:ಬೆಸ್ಟ್ ಪಾಸರ್ : ಅಖಿಲ್ ತೋಮಸ್ ಎಸ್. ಡಿ. ಎಂ ಪಿಯು ಕಾಲೇಜ್ ಉಜಿರೆ, ಬೆಸ್ಟ್ ಆಲ್ರೌಂಡರ್ : ಕಾಲೇಜು ಮೂಡಬಿದ್ರೆ. ಸುಮಂತ್ ಆಳ್ವಾಸ್ ಪಿ ಯು

ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ: ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿದ ಎಸ್ ಡಿ ಎಂ ಪಿಯು ಕಾಲೇಜು ಉಜಿರೆ, ದ್ವಿತೀಯ ಸ್ಥಾನ: ಮಂಗಳೂರು ನಗರವನ್ನು ಪ್ರತಿನಿಧಿಸಿದ ಶಾರದಾ ಪಿಯು ಕಾಲೇಜು ಮಂಗಳೂರು,

ವೈಯಕ್ತಿಕ ಪ್ರಶಸ್ತಿ : ಬೆಸ್ಟ್ ಅಟ್ಟ್ಯಾಕರ್: ತುಳಸಿ ಎಸ್ ಡಿ ಎಂ ಪಿಯು ಕಾಲೇಜು ಉಜಿರೆ, ಬೆಸ್ಟ್ ಆಲ್-ರೌಂಡರ್: ನವ್ಯ ಶಾರದಾ ಪಿಯು ಕಾಲೇಜು ಮಂಗಳೂರು

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಪಿ.ಯು.ಕಾಲೇಜಿನ ಪ್ರಾಂಶುಪಾಲ ಪ್ರೊ.ದಿನೇಶ್ ಚೌಟ, ಉಪ ಪ್ರಾಂಶುಪಾಲ ಪ್ರಮೋದ್ ಕುಮಾರ್, ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಹೆಚ್, ಮುಂಡಾಜೆ ಫ್ರೌಡಶಾಲಾ ದೈಹಿಕ ಶಿಕ್ಷಣ ನಿರ್ದೇಶಕ ಗುಣಪಾಲ, ಎಸ್.ಡಿ.ಎಂ.ಪಿ.ಯು ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಸಂದೇಶ್ ಪೂಂಜ ಉಪಸ್ಥಿತರಿದ್ದರು. ಧರ್ಮೇಂದ್ರ ಕುಮಾರ್ ಹಾಗೂ ಮಹಾವೀರ ಜೈನ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.