ಬೆಳ್ತಂಗಡಿ: ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎ ನವೀನ್ ಚಂದ್ರ ಆಯ್ಕೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ನೂತನ ಅಧ್ಯಕ್ಷರಾಗಿ ಉಜಿರೆ ಕಜೆಕಾರ್ ನವೀನ್ ಚಂದ್ರ ಹಾಗೂ ಉಪಾಧ್ಯಕ್ಷರಾಗಿ ಬೆಳ್ತಂಗಡಿ ಅಶ್ವಿನಿ ಮೆಡಿಕಲ್ಸ್ ನ ಎಂ. ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.

ಮಾ.೧೫ರಂದು ಉಜಿರೆಯಲ್ಲಿ ನಡೆದ ಸಂಘದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಉಜಿರೆ ಸುರಕ್ಷಾ ಮೆಡಿಕಲ್ಸ್ ನ ಶ್ರೀಧರ್ ಕೆ.ವಿ, ಕೋಶಾಧಿಕಾರಿಯಾಗಿ ಬೆಳ್ತಂಗಡಿ ಅಮರ್ ಮೆಡಿಕಲ್ಸ್ ನ ಗಣಪತಿ ಭಟ್ ಆಯ್ಕೆಯಾಗಿದ್ದಾರೆ.

ಕಾರ್ಯಾಕಾರಿ ಸಮಿತಿ ಸದಸ್ಯರುಗಳಾಗಿ ರಮಾನಂದ ಬಿ.ಎಂ ಮೆಡಿಕಲ್ಸ್ ಉಜಿರೆ, ಪ್ರಕಾಶ್ ಮಹಾಗಣಪತಿ ಎಂಟರ್ ಪ್ರೆöÊಸಸ್ ಬೆಳ್ತಂಗಡಿ, ರಘುನಾಥ ದಾಮ್ಲೆ ವಿನಯ ಮೆಡಿಕಲ್ಸ್ ಅಳದಂಗಡಿ, ಡಾ| ಧರಣೇಂದ್ರ ಜೈನ್ ಶಾರದಾ ಮೆಡಿಕಲ್ಸ್ ಕಾರ್ಯತಡ್ಕ, ರಮೇಶ್ ಬೆಸ್ಟ್ ಮೆಡಿಕಲ್ಸ್ ಗೇರುಕಟ್ಟೆ, ಉದಯ ಕುಮಾರ್ ಮಹಾವೀರ ಮೆಡಿಕಲ್ಸ್ ಮಡಂತ್ಯಾರ್, ಖಾಯಂ ಆಹ್ವಾನಿತರಾಗಿ ಮಾಧವ ಗೌಡ ಗಣೇಶ್ ಮೆಡಿಕಲ್ಸ್ ಬೆಳ್ತಂಗಡಿ, ಕಾಶಿನಾಥ ಬೆನಕ ಮೆಡಿಕಲ್ಸ್ ಗುರುವಾಯನಕೆರೆ, ಸೇಸಪ್ಪ ಗಣೇಶ್ ಮೆಡಿಕಲ್ಸ್ ಮಡಂತ್ಯಾರು, ಡಾ| ಸಂತೋಷ್ ಸಿಂಧೂರ ಮೆಡಿಕಲ್ಸ್ ಕಲೇರಿ, ಶ್ರೀಶ ಚಿಕಿತ್ಸಾ ಫಾರ್ಮ್ ಬೆಳ್ತಂಗಡಿ ಮತ್ತು ಜಿಲ್ಲಾ ಅಧ್ಯಕ್ಷ ಸುಜಿತ್ ಎಂ. ಭಿಡೆ ಆಯ್ಕೆಯಾಗಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.