ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾಗಿ ಮುಂಡಾಜೆಯ ಸುಜಿತ್ ಎಂ.ಭಿಡೆ ಆಯ್ಕೆ

ಬೆಳ್ತಂಗಡಿ: ದ.ಕ ಜಿಲ್ಲಾ ಔಷಧ ವ್ಯಾಪಾರಸ್ಥರ (ಚಿಲ್ಲರೆ,ರಖಂ) ಸಂಘದ ಅಧ್ಯಕ್ಷರಾಗಿ ಮುಂಡಾಜೆಯ ಔಷಧ ವ್ಯಾಪಾರಿ ಸುಜಿತ್ ಎಂ.ಭಿಡೆ ಆಯ್ಕೆಯಾಗಿದ್ದಾರೆ.

ಮಾ.14 ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಭಾಭವನದಲ್ಲಿ ನಿಕಟಪೂರ್ವ ಅಧ್ಯಕ್ಷ ಶ್ರೀಧರ ಕಾಮತ್ ಹಾಗೂ ನಿಕಟಪೂರ್ವ ಕಾರ್ಯದರ್ಶಿ ಗಣೇಶ್ ಕಾಮತ್ ರವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಇವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಸುಜಿತ್ ಎಂ.ಭಿಡೆ ರವರು ಕಳೆದ ಸುಮಾರು 20 ವರ್ಷಗಳಿಂದ ತಾಲೂಕಿನ ಕಕ್ಕಿಂಜೆ ಹಾಗೂ ಮುಂಡಾಜೆಯಲ್ಲಿ ಭಿಡೆ ಮೆಡಿಕಲ್ಸ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.