ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ರೈತರಿಗೆ ತಲುಪಿಸುವ ಕಾರ್ಯ: ಹರೀಶ್ ಪೂಂಜ
ಬೆಳ್ತಂಗಡಿ: ದ.ಕ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬೆಳ್ತಂಗಡಿ ತಾಲೂಕು ವತಿಯಿಂದ 2020-21ನೇ ಸಾಲಿನ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಯಡಿ ಸಹಾಯಧನದಲ್ಲಿ ರೈತರಿಗೆ ಸಣ್ಣ ಟ್ಯ್ರಾಕ್ಟರ್ ಮತ್ತು ಟಿಲ್ಲರ್ ವಿತರಣೆ ಕಾರ್ಯಕ್ರಮ ಮಾ.14 ರಂದು ಬೆಳ್ತಂಗಡಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ನಡೆಯಿತು.
ಶಾಸಕ ಹರೀಶ್ ಪೂಂಜ ರೈತರಿಗೆ ಸಣ್ಣ ಟ್ಯ್ರಾಕ್ಟರ್ ಮತ್ತು ಟಿಲ್ಲರ್ ವಿತರಿಸಿ ಮಾತನಾಡಿ, ಕೃಷಿಕರಿಗೆ ಮತ್ತು ಕೃಷಿ ಚಟುವಟಿಕೆ ಮಾಡುವವರಿಗೆ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವ ಕಾರ್ಯ ಸರಕಾರ ಮಾಢುತ್ತಿದೆ. ರೈತರು ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕೃಷಿಯಲ್ಲಿ ಅಭಿವೃದ್ದಿ ಹೊಂದಬೇಕು ಎಂದರು.
ಈ ಸಂದರ್ಭದಲ್ಲಿ ತಾ.ಪಂ ಉಪಾಧ್ಯಕ್ಷೆ ವೇದಾವತಿ, ಕೃಷಿ ಸಹಾಯಕ ನಿರ್ದೇಶಕ ರಂಜಿತ್, ಸಹಾಯಕ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ಮತ್ತು ಕೃಷಿ ಇಲಾಖೆಯ ಸಿಬ್ಬಂದಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.
ಟ್ರ್ಯಾಕ್ಟರನ್ನು ನಾರಾಯಣ ಗೌಡ ಕಡಿರುದ್ಯಾವರ, ಶೀನ ಇಂದಬೆಟ್ಟು ಇವರಿಗೆ ಹಾಗೂ ಟಿಲ್ಲರನ್ನು ವೀರಪ್ಪ ನಾಯ್ಕ ಉಜಿರೆ, ನೋಣಯ್ಯ ನಾಯ್ಕ ನಡ ಇವರಿಗೆ ಶಾಸಕರು ಹಸ್ತಾಂತರಿಸಿದರು.
Swalpa jaameenu irorige krishi saala kodtheera.yenakke upayogiskondru sari, haagu raitharige yella facilities madi kodtheera. Aadre 5 sentsnalli irorige yavude reethiyaadantha prayojanagalu illa. Papaa avarugalu dudide thinbeku. Dodda kelsanu iralla.