ಬೆಳ್ತಂಗಡಿ : ‘ಶೈಕ್ಷಣಿಕ ಚಟುವಟಿಕೆಗಳು ಕೇವಲ ಜ್ಞಾನರ್ಜಾನೆ, ವಿಷಯ ತಿಳುವಳಿಕೆಗೆ ಮಾತ್ರ ಸೀಮಿತವಾಗಬಾರದು. ಹೊರತಾಗಿ ಶಿಕ್ಷಣ ಹಂತದಲ್ಲಿ ಸಿಗುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಸಾಧನೆಯ ಮೇಟಿಲೇರುವುದು ಪ್ರತಿಯೋರ್ವ ವಿದ್ಯಾರ್ಥಿಯ ಗುರಿಯಾಗಬೇಕು’ ಎಂದು ಬೆಳ್ತಂಗಡಿ ಶ್ರೀ ಗುರುದೇವ ವಿದ್ಯಾಸಂಸ್ಥೆಯ ಅಧ್ಯಕ್ಷ , ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಮಾ.10ರಂದು ಶ್ರೀ ಗುರುದೇವ ಕಾಲೇಜಿನ ಆವರಣದಲ್ಲಿ ನಡೆದ ಶ್ರೀ ಗುರುದೇವ ಪದವಿಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ನೆರವೇರಿಸಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ‘ಪ್ರತಿಯೋರ್ವ ವಿದ್ಯಾರ್ಥಿಯೂ ಶಿಕ್ಷಣದ ಮಹತ್ವವನ್ನು ಅರಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಸಮಯ ಕಳೆಯುವುದಕ್ಕಾಗಿಯೋ ಅಥವಾ ಮತ್ಯಾರೋ ಒತ್ತಡಕ್ಕಾಗಿ ಶಿಕ್ಷಣವನ್ನು ಪಡೆಯುವಂತಗಬಾರದು. ಏಕತ ಚಿತ್ತದಿಂದ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ನಾಯಕನಾಗಿ ಬೆಳಯಬೇಕು ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಉಜಿರೆ ಎಸ್.ಡಿ.ಎಂ.ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಲಕ್ಷ್ಮೀನಾರಾಯಣ ಮಾತನಾಡಿ, ‘ವಿದ್ಯಾಭ್ಯಾಸದ ಕೊರತೆಯಾದಾಗ ನಮ್ಮಲ್ಲಿ ಆತ್ಮವಿಶ್ವಾಸ ಬರಡಾಗುತ್ತದೆ. ಅದು ಬದುಕಿನ ಸಾಧನೆಗೆ ಹಿನ್ನೆಡೆಯಾಗುವುದು. ನಾವು ನಮ್ಮದೇ ಉತ್ತಮ ದಾರಿಯನ್ನು ಸೃಷ್ಟಿ ಮಾಡಿಕೊಳ್ಳವುದು ನಿಜವಾದ ಕ್ರೀಯಾಶೀಲತೆ. ವಿದ್ಯಾಸಂಸ್ಥೆಯ ಒಳಗೆ ಸಿಗುವ ನೂರಾರು ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡು ಸಂಸ್ಥೆಯಿಂದ ಹೊರಹೋಗುವಾಗ ಸಾಧಕರಾಗಿ ಹೋಗಬೇಕು’ ಎಂದರು.
ಅತಿಥಿ, ಮೆಟ್ರಿಕ್ ನಂತರದ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಸತಿ ನಿಲಯದ ನಿಲಯ ಮೇಲ್ವೀಚಾರಕ ಚಂದ್ರಪ್ಪ ಡಿ ಮಾತನಾಡಿ, ‘ಇವತ್ತು ಜ್ಞಾನಕ್ಕಾಗಿ ಎಲ್ಲೆಲ್ಲೋ ಹುಡುಕಬೇಕಾದ ಅಗತ್ಯವಿಲ್ಲ. ಕ್ಷಣ ಮಾತ್ರದಲ್ಲಿ ಮಾಹಿತಿಗಳನ್ನು ಸಂಗ್ರಹಿಸುವ ಸಶಕ್ತರಾಗಿ ನಾವಿಂದು ಬೆಳೆದಿದ್ದೇವೆ. ಹಾಗಾಗಿ ನಮ್ಮಲ್ಲಿರುವ ಮೊಬೈಲ್ಗಳು ನಮ್ಮ ಒಳ್ಳೆಯ ಉದ್ದೇಶಗಳಿಗೆ ಬಳಕೆಯಾಗಬೇಕೇ ವಿನಃ ದುರುದ್ದೇಶಕ್ಕೆ ಬಳಕೆಯಾಗಬಾರದು ಎಂದರು.
ಪಿಯಸಿ ವಿಭಾಗದ ವಿದ್ಯಾರ್ಥಿನಾಯಕ ಚಿತ್ತರಂಜನ್, ಪದವಿ ವಿಭಾಗದ ವಿದ್ಯಾರ್ಥಿ ನಾಯಕ ಸಂತೋಷ್ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ರಕ್ಷಿತಾ, ಶ್ರಾವ್ಯ, ಜ್ಯೋತಿ, ಸೌಮ್ಯಶ್ರೀ, ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ಕಾವ್ಯ, ತೇಜಸ್ವಿ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಕ್ರೀಡಾ ತರಬೇತುದಾರರಾಗಿ ಸಹಕರಿಸಿದ ನವೀನ್ ಇಂದಬೆಟ್ಟು ಹಾಗೂ ರಶೀದ್ರನ್ನು ಸನ್ಮಾನಿಸಲಾಯಿತು. ಪದವಿ ವಿಭಾಗದಲ್ಲಿ ಸಾಂಸ್ಕøತಿಕ ಹಾಗೂ ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.
ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿಗಳಾದ ಸುನೈನ ಬಾನು, ಅಂಕಿತ, ಉಪಾಧ್ಯಕ್ಷರಾದ ಪ್ರೀತಂ ಲೋಬೋ, ಸ್ನೇಹಿತ್, ಜೊತೆ ಕಾರ್ಯದರ್ಶಿಗಳಾದ ಪ್ರಣಮ್ಯ ಹಾಗೂ ಶುಭ ಡಿ ಇದ್ದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಸ್ವಾಗತಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಬಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಮಾಜಶಾಸ್ತ್ರ ಉಪನ್ಯಾಸಕ ಶಮೀವುಲ್ಲಾ, ಕನ್ನಡ ಉಪನ್ಯಾಸಕ ಗಣೇಶ್ ಬಿ.ಶಿರ್ಲಾಲು ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಮನುಜಾ, ಅರ್ಥಶಾಸ್ತ್ರ ಉಪನ್ಯಾಸಕಿ ಬಬಿತ, ಆಂಗ್ಲಭಾಷಾ ಉಪನ್ಯಾಸಕಿ ಅನುಷಾ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಪವಿತ್ರಾ ಸನ್ಮಾನಿತರನ್ನು ಪರಿಚಯಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಡಾ. ಸವಿತಾ, ರಾಜ್ಯಶಾಸ್ತ್ರ ಉಪನ್ಯಾಸಕಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕ ರಾಕೇಶ್ ಕುಮಾರ್ ವಂದಿಸಿದರು.