ಬೆಳ್ತಂಗಡಿ: ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಚಾಲಕ, ಸಹ ಸಂಚಾಲಕ ಹಾಗೂ ಸದಸ್ಯರ ನೇಮಕಾತಿ ನಡೆದಿದ್ದು, ದ.ಕ.ಜಿಲ್ಲಾ ಪ್ರಕೋಷ್ಠದ ಸದಸ್ಯರಾಗಿ ಮೋಹನದಾಸ ಅಳದಂಗಡಿ ಇವರು ನೇಮಕವಾಗಿದ್ದಾರೆ.
ಮುಂದಿನ ವರ್ಷ 2 ವರ್ಷಗಳ ಕಾಲಾವಧಿಗೆ ಬಿಜೆಪಿಯ ಕ್ರೀಯಾಶೀಲ ಕಾರ್ಯಕರ್ತ ಮೋಹನದಾಸ ಅಳದಂಗಡಿ ಅವರು ಆಯ್ಕೆಯಾಗಿದ್ದು, ಇವರು ಅಳದಂಗಡಿ ಗ್ರಾ.ಪಂ.ನಲ್ಲಿ ಮೂರು ಬಾರಿ ಸದಸ್ಯರಾಗಿ ಗ್ರಾಮದ ಸೇವೆ ಸಲ್ಲಿಸಿದ್ದರು. ಕಳೆದ ಬಾರಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.