ಕಥೊಲಿಕ್ ಸಭಾ ವತಿಯಿಂದ ಬಂಟ್ವಾಳ ವೃತ್ತ ನಿರೀಕ್ಷಕರಿಗೆ ಅಭಿನಂದನಾ ಸಮಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ ಬಂಟ್ವಾಳ ವಲಯದ ವತಿಯಿಂದ ಬಂಟ್ವಾಳ ವೃತ್ತ ನಿರೀಕ್ಷಕ  ಟಿ.ಡಿ ನಾಗರಾಜ ರವರಿಗೆ ಅಭಿನಂದನಾ ಸಮಾರಂಭವು  ಮೊಡಂಕಾಪು ಚರ್ಚ್ ಸಭಾಂಗಣದಲ್ಲಿ ಜರುಗಿತು.
2019ನೇ ಸಾಲಿನ ಕರ್ನಾಟಕ ಸರ್ಕಾರದ ಚಿನ್ನದ ಪದಕ ಪಡೆದ ಬಂಟ್ವಾಳ ವೃತ್ತ ನಿರೀಕ್ಷಕರಾದ ಟಿ.ಡಿ ನಾಗರಾಜ ರವರನ್ನು ಬಂಟ್ವಾಳ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂ. ವಲೇರಿಯನ್ ಡಿ’ಸೋಜಾ ರವರು ಶಾಲು ಹೊದಿಸಿ, ಪೇಟ ತೊಡಿಸಿ, ಫಲ ಪುಷ್ಪ, ಸ್ಮರಣಿಕೆ ಹಾಗೂ ಸನ್ಮಾನ ಪತ್ರವನ್ನು ನೀಡಿ ಗೌರವಿಸಿದರು.

ಕಥೊಲಿಕ್ ಸಭಾ ಕೇಂದ್ರದ ಅಧ್ಯಕ್ಷ ಸ್ಟ್ಯಾನಿ ಲೋಬೊ ಹಾಗೂ ಕೇಂದ್ರದ ಪದಾಧಿಕಾರಿಗಳು ಹಾಗೂ ಮಾಜಿ ಅಧ್ಯಕ್ಷರು ಕಥೊಲಿಕ್ ಸಭಾ ಕೇಂದ್ರದ ಪರವಾಗಿ ಅಭಿನಂದನೆಯನ್ನು ಸಲ್ಲಿಸಿ ಹೂಗುಚ್ಛ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಕಥೊಲಿಕ್ ಸಭಾ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಲ್ಫೋನ್ಸ್ ಫೆರ್ನಾಂಡಿಸ್, ಕೇಂದ್ರದ ಮಾಜಿ ಅಧ್ಯಕ್ಷರು ಉಪಸ್ಥಿತರಿದ್ದರು.

ಸನ್ಮಾನಕ್ಕೆ  ಸ್ವೀಕರಿಸಿ ಮಾತನಾಡಿದ ವೃತ್ತ ನಿರೀಕ್ಷಕರು ತಮ್ಮ ಈ ಗೌರವಕ್ಕೆ ನಾನು ಋಣಿಯಾಗಿದ್ದು, ನನ್ನ ಕೈಯಿಂದಾಗುವ ಎಲ್ಲಾ ರೀತಿಯ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು. ಬಂಟ್ವಾಳ ವಲಯದ ಅಧ್ಯಕ್ಷ ಕಾರ್ಮಿನ್ ಗೋವಿಯಾಸ್  ಸ್ವಾಗತಿಸಿದರು. ಕಾರ್ಯದರ್ಶಿ ರಿಚಾರ್ಡ್ ಮಿನೇಜಸ್ ರವರು ಸನ್ಮಾನ ಪತ್ರ ವಾಚಿಸಿ ಧನ್ಯವಾದಗೈದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.