ಕಥೊಲಿಕ್ ಸಭಾದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಗಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ ಇದರ ವತಿಯಿಂದ ಕಥೊಲಿಕ್ ಸಭಾ ಬಂಟ್ವಾಳ, ಬೆಳ್ತಂಗಡಿ ಮೊಗರ್ನಾಡ್ , ಪುತ್ತೂರು ವಲಯದ ಹಾಗೂ ಘಟಕದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಗಾರ  ಮೊಡಂಕಾಪಿನ ಚರ್ಚ್ ಸಭಾಂಗಣದಲ್ಲಿ ಜರುಗಿತು.
ಬಂಟ್ವಾಳ ವಲಯದ ಪ್ರಧಾನ ಧರ್ಮಗುರು ಅತೀ ವಂ. ವಲೇರಿಯನ್ ಡಿ’ಸೋಜಾ ಕಾರ್ಯಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕಥೊಲಿಕ್ ಸಭೆಯ ಪದಾಧಿಕಾರಿಗಳು ಜನರ ಅಶೋತ್ತರಗಳಿಗೆ ಸ್ಪಂದಿಸಿ, ಜನರಿಂದ ಮನ್ನಣೆ ಪಡೆದು ಸ್ವಾಸ್ಥ ಸಮಾಜ ರೂಪಗೊಳ್ಳಲಿ ಎಂದು ಹಾರೈಸಿದರು.

ಕಥೊಲಿಕ್ ಸಭಾ ಕೇಂದ್ರದ ಅಧ್ಯಕ್ಷ  ಸ್ಟ್ಯಾನಿ ಲೋಬೊ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಅಲ್ಫೋನ್ ಫೆರ್ನಾಂಡಿಸ್ ಹಾಗೂ ನಾಲ್ಕು ವಲಯಗಳ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ವಿಷಯಗಳಲ್ಲಿ ಅವರು ನಿರ್ವಹಿಸುವ ಹುದ್ದೆಗಳನ್ನು ನಿರ್ವಹಿಸುವಾಗ ಯಾವ ರೀತಿ ನಿರ್ವಹಿಸಿದರೆ ಹುದ್ದೆ ಪರಿಣಾಮಕಾರಿಯಾಗುತ್ತದೆ ಎಂದು ವಿವಿಧ ಸಂಪನ್ಮೂಲ ವ್ಯಕ್ತಿಗಳು ತರಬೇತಿಯನ್ನು ನೀಡಿದರು.

ಬಂಟ್ವಾಳ ವಲಯದ ಅಧ್ಯಕ್ಷ ಕಾರ್ಮಿನ್ ಗೋವಿಯಸ್  ಸ್ವಾಗತಿಸಿದರು. ಕಥೊಲಿಕ್ ಸಭಾ ಕೇಂದ್ರದ ನಿಯೋಜಿತ ಅಧ್ಯಕ್ಷ ರಾಜು ಸ್ಟೀಫನ್ ಡಿ’ಸೋಜಾ  ವಂದಿಸಿದರು. ಪ್ಯಾಟ್ರಿಕ್ ಡಿ’ಸೋಜಾ ವಾಲೆನ್ಸಿಯಾ ಕಾರ್ಯಕ್ರಮವನ್ನು ನಿರ್ವಹಿಸಿದರು. ನಾಲ್ಕು ವಲಯದ ಎಲ್ಲಾ ಘಟಕಗಳಿಂದ ಸುಮಾರು 200 ಅಧಿಕ ಮಂದಿ ಪದಾಧಿಕಾರಿಗಳು ಹಾಜರಿದ್ದು ತರಬೇತಿ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.