ಮೂಡುಕೋಡಿ ಹಾಲು ಉತ್ಪಾದಕರ ಸಹಕಾರಿ ಸ೦ಘದ ಅಧ್ಯಕ್ಷರಾಗಿ ಪ್ರಕಾಶ್ ಭಟ್ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮೂಡುಕೋಡಿ:  ಇಲ್ಲಿಯ ಮೂಡುಕೋಡಿ ಹಾಲು ಉತ್ಪಾದಕರ ಸಹಕಾರಿ ಸ೦ಘ ಅಧ್ಯಕ್ಷರಾಗಿ ಸಹಕಾರ ಭಾರತಿ  ಬೆಂಬಲಿತರಾದ ಪ್ರಕಾಶ್ ಕೆ ಹಾಗೂ ಉಪಾಧ್ಯಕ್ಷರಾಗಿ ಸದಾನಂದ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಾ.6 ರಂದು ಮೂಡುಕೋಡಿ ಹಾಲು ಉತ್ಪಾದಕರ ಸಹಕಾರಿ ಸ೦ಘ ವಠಾರದಲ್ಲಿ ನಡೆದ  ಅಧ್ಯಕ್ಷ  ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿ ಸುಕನ್ಯಾ ಕೆ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ಮೂಡುಕೋಡಿ ಹಾಲು ಉತ್ಪಾದಕರ ಸಹಕಾರಿ ಸ೦ಘದ ಒಟ್ಟು 13 ಸ್ಥಾನಗಳ ಪೈಕಿ 9 ಮಂದಿ ಸಹಕಾರ ಭಾರತಿ ಬೆಂಬಲಿತರು  ಹಾಗೂ ಇತರ 4 ಮಂದಿ ನಿರ್ದೇಶಕರುಗಳು ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದರು.

ಈ ಸಂದರ್ಭದಲ್ಲಿ ಸಹಕಾರ ಭಾರತಿ ತಾಲೂಕು ಅಧ್ಯಕ್ಷ ಸು೦ದರ ಹೆಗ್ಡೆ ,ಜೊಯಿಸ್ ರೇಗೋ ,ಕಾರ್ಯದರ್ಶಿ ವಿಲ್ಪ್ರೆಡ್ ನಜ್ರೆತ್, ವೇಣೂರು ಗ್ರಾ.ಪಂ  ಸದಸ್ಯ  ಹರೀಶ್ ಪಿ ಎಸ್, ಲಕ್ಷ್ಮಣ ಪೂಜಾರಿ ,ನೀರು ಮತ್ತು ನೈಮ೯ಲ್ಯ ಸಮಿತಿಯ ಸದಸ್ಯ ಅನೂಪ್ ಜೆ ಪಾಯಸ್  ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.