ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಚರ್ಚ್‌ಗೆ ಮಂಗಳೂರು ಧರ್ಮಾಧ್ಯಕ್ಷರ ಭೇಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು: ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಪೀಟರ್ ಪೌಲ್ ಸಲ್ಡಾನ ರವರು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಗೆ  ಮಾ. 6ರಂದು ಭೇಟಿ ನೀಡಿದರು.

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಪ್ರಧಾನ ಧರ್ಮಗುರು ವಂ. ಫಾ.ಬೇಸಿಲ್‌ವಾಸ್ ಧರ್ಮಾಧ್ಯಕ್ಷರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ಫಾ. ಸ್ಟಿವನ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಲಿಯೋ ರೊಡ್ರಿಗಸ್, ಕಾರ್ಯದರ್ಶಿ ಜೆರಾಲ್ಡ್, ಪ್ರಾಂಶುಪಾಲರಾದ ವಂ. ಫಾ. ಜೆರೋಮ್ ಡಿಸೋಜಾ, ಸಹಾಯಕ ಧರ್ಮಗುರು, ಆಶಾ ದೀಪದ ಧರ್ಮಗುರು ವಂ.ಫಾ. ಜೋರ್ಜ್ ಮೊದಲಾದವರು ಉಪಸ್ಥಿತರಿದ್ದು, ಧರ್ಮಾಧ್ಯಕ್ಷರನ್ನು ಆದರದಿಂದ ಬರಮಾಡಿಕೊಂಡರು.

3 ವರ್ಷಕೊಮ್ಮೆ ನಡೆಯುವ ಅಧಿಕೃತ ಭೇಟಿ ಇದಾಗಿದ್ದು, ಧರ್ಮಗುರುಗಳು ಎರಡು ದಿನಗಳ ಕಾಲ ಇಲ್ಲಿಯೇ ವಾಸ್ತವ್ಯವಿದ್ದು, ಎಲ್ಲಾ ಸಂಘ ಸಂಸ್ಥೆ, ಚರ್ಚ್ ಪಾಲನಾ ಮಂಡಳಿ, ವಿದ್ಯಾ ಸಂಸ್ಥೆಗಳಿಗೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಮನೆಗಳಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.