ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ರವರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ತಾಲೂಕಿನ 13 ವಿಶೇಷ ಚೇತನ ಫಲಾನುಭವಿಗಳಿಗೆ ದೈನಂದಿನ ಚಟುವಟಿಕೆಗಳಿಗೆ ಉಪಯೋಗವಾಗಲು ತ್ರಿಚಕ್ರ ವಾಹನಗಳ ವಿತರಣಾ ಕಾರ್ಯಕ್ರಮವು ಮಾ.6 ರಂದು ಬೆಳ್ತಂಗಡಿ ನಿರೀಕ್ಷಣಾ ಮಂದಿರದಲ್ಲಿ ಜರುಗಿತು.

ಶಾಸಕ ಹರೀಶ್ ಪೂಂಜ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಕ್ಷೇತ್ರದ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ,   ನ.ಪಂ ಅಧ್ಯಕ್ಷೆ ಶ್ರೀಮತಿ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ತುಳಸಿ ಕರುಣಾಕರ್,  ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಸೌತಡ್ಕ ಸೇವಾಧಾಮದ ಅಧ್ಯಕ್ಷ ವಿನಾಯಕ ರಾವ್ ಕನ್ಯಾಡಿ-II, ತಾ.ಪಂ ಸದಸ್ಯರಾದ ಜೋಯೆಲ್ ಮೆಂಡೋನ್ಸಾ, ಸುಧಾಕರ್ ಎಲ್, ಸಿಡಿಪಿಒ ಪ್ರಿಯಾ ಆಗ್ನೇಸ್, ವಿಕಲ ಚೇತನ ಯೋಜನಾಧಿಕಾರಿ ಯಮುನಾ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿಶೇಷ ಚೇತನ ಫಲಾನುಭವಿಗಳಾದ ವಿನಾಯಕ ರಾವ್ ಕನ್ಯಾಡಿ, ಲಕ್ಷ್ಮಣ ಗೌಡ ಚಾರ್ಮಾಡಿ, ಜಗದೀಶ ಗೌಡ ಧರ್ಮಸ್ಥಳ, ಚಂದ್ರಶೇಖರ ಆರಂಬೋಡಿ, ಎನ್.ಪಿ ಪ್ರಕಾಶ ರೆಖ್ಯ, ರಾಮಣ್ಣ ಪೂಜಾರಿ ಕುಕ್ಕೇಡಿ, ಶಾಲು ಜೋಸೆಫ್ ನೆರಿಯ, ನೇಮಣ್ಣ ಪೂಜಾರಿ ಬಾರ್ಯ, ಡೀಕಯ್ಯ ಗೌಡ ನಿಡ್ಲೆ, ಪಾವನಾ ಕೆ.ಎಸ್ ಲಾಲ, ಚಿರಂಜೀವಿ ನಾಳ, ಶಾಜಿ ಚಾರ್ಮಾಡಿ, ಜಯ ಪೂಜಾರಿ ಪೆರಾಡಿ ಇವರುಗಳಿಗೆ ತ್ರಿಚಕ್ರ ವಾಹನಗಳನ್ನು ಶಾಸಕರು ಹಸ್ತಾಂತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.