ಗುರುವಾಯನಕೆರೆ ಬಸ್ಸು ತಂಗುದಾಣದಲ್ಲಿ ವೃದ್ಧರೋರ್ವರ ಶವ ಪತ್ತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕುವೆಟ್ಟು: ಇಲ್ಲಿಯ ಗುರುವಾಯನಕೆರೆ ಸಾರ್ವಜನಿಕ ಬಸ್ಸು ತಂಗುದಾಣದಲ್ಲಿ ಸುಮಾರು 55 ರಿಂದ 60 ವರ್ಷ ವಯೋಮಾನದ ವೃದ್ಧರೋರ್ವರ ಶವ ಪತ್ತೆಯಾಗಿದೆ.
ಮಾ.೫ರಂದು ಮಧ್ಯಾಹ್ನ 2.00ಗಂಟೆಯ ಸಮಯದಲ್ಲಿ ಶಿವಪ್ರಸಾದ್ ಎಂಬವರು ಕುವೆಟ್ಟು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯವರಿಗೆ ಫೋನ್ ಕರೆಯ ಮೂಲಕ ಗುರುವಾಯನಕೆರೆ ಬಸ್ಸು ತಂಗುದಾಣದಲ್ಲಿ ಅಪರಿಚಿತ ವೃದ್ಧರೋರ್ವರ ಮೃತದೇಹವಿರುವುದಾಗಿ ತಿಳಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪಿಡಿಒ ರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಈ ಬಗ್ಗೆ ವಿಚಾರ ತಿಳಿಸಿದ್ದರು.
ಯಾವುದೋ ಖಾಯಿಲೆ ಅಥವಾ ಇನ್ನಿತರ ಕಾರಣದಿಂದ ಮಲಗಿದಲ್ಲಿಯೇ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದ್ದು, ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.