ಪಡಂಗಡಿ ಗ್ರಾ.ಪಂ. ಸ್ವಚ್ಛ ಸಂಕೀರ್ಣ ಘಟಕದ ಲೋಕಾರ್ಪಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪಡಂಗಡಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ, ಪಡಂಗಡಿ ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆ ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ಯೋಜನೆಯಡಿಯಲ್ಲಿ ತ್ಯಾಜ್ಯ ವಿಂಗಡನೆಯ ಜಾಗೃತಿ ಮೂಡಿಸುವ ವಿಶೇಷ ಆಂದೋಲನದ ಸಮಾರೋಪ ಮತ್ತು ಸ್ವಚ್ಛ ಸಂಕೀರ್ಣ ಘಟಕ ಲೋಕಾರ್ಪಣೆ ಮಾ. 6 ರಂದು ಗರ್ಡಾಡಿ ಗ್ರಾಮದ ಹಚ್ಚಾಡಿಯಲ್ಲಿ ನಡೆಯಿತು.

ಶಾಸಕ ಹರೀಶ್ ಪೂಂಜ ಸ್ವಚ್ಛ ಸಂಕೀರ್ಣ ಘಟಕವನ್ನು ಲೋಕಾರ್ಪಣೆಗೊಳಿಸಿ, ಸ್ವಚ್ಛತಾ ವಾಹನಕ್ಕೆ ಚಾಲನೆ ನೀಡಿದರು. ಪಡಂಗಡಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಅಳದಂಗಡಿ ಕ್ಷೇತ್ರದ ಜಿ.ಪಂ ಸದಸ್ಯ ಶೇಖರ್ ಕುಕ್ಕೇಡಿ, ತಾ.ಪಂ ಸದಸ್ಯೆ ಶ್ರೀಮತಿ ಸುಶೀಲಾ, ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ಕವಿತಾ,  ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಫಾನಾ, ನೋಡೆಲ್ ಅಧಿಕಾರಿಗಳ ಉಪಕಾರ್ಯದರ್ಶಿ ಕೆ ಆನಂದ್ ಕುಮಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಕನ್ನಡಿಕಟ್ಟೆ ಮೊಹಿಯುದ್ದೀನ್ ಜುಮಾ ಮಸೀದಿ ಧರ್ಮಗುರು ಸಮಶುದ್ದೀನ್ ದಾರಿಮಿ, ಖ್ಯಾತ ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಪ್ರಮುಖರಾದ ಶಂಕರ ಶೆಟ್ಟಿ ಗರ್ಡಾಡಿ, ನಿತ್ಯಾನಂದ ಶೆಟ್ಟಿ ಪದೆಂಜಿಲ, ಎಸ್‌ಕೆಡಿಆರ್‌ಡಿ ಬಿ.ಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಯೋಜನಾಧಿಕಾರಿ ಯಶವಂತ್, ವಿವಿಧ ಇಲಾಖಾಧಿಕಾರಿಗಳು, ಗ್ರಾ.ಪಂ. ಸದಸ್ಯರಾದ ಸಂತೋಷ್ ಕುಮಾರ್ ಜೈನ್, ರಿಚ್ಚರ್ಡ್ ಗೋವಿಯಸ್, ಹರೀಶ್, ಪ್ರಶಾಂತ್, ಹಾಮದ್ ಬಾವ, ಯೋಗೀಶ ಭಟ್, ಅಶೋಕ್ ಸಫಲ್ಯ, ಶಕುಂತಳಾ, ಗಾಯತ್ರಿ, ವಿನೋದಾ, ಕೃಷ್ಣಪ್ಪ, ಶುಭ, ವನಜಾಕ್ಷಿ, ವಸಂತಿ ಪಿ, ಸುಮತಿ, ಗ್ರಾ.ಪಂ ಸಿಬ್ಬಂದಿವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು. ತಾ.ಪಂ ಸಂಯೋಜಕ ಜಯಾನಂದ ಕಾಯ೯ಕ್ರಮ ನಿವ೯ಹಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿರುವ ಗಣ್ಯರು  ಸ್ವಚ್ಛತಾ ಜಾಗೃತಿ ಕರಪತ್ರ ಬಿಡುಗಡೆಗೊಳಿಸಿದರು. ವಿಶೇಷ ಚೇತನರಿಗೆ ಸಹಾಯಧನ  ವಿತರಣೆ ಹಾಗೂ  ಕಸ ಸಂಗ್ರಹದ ಬಕೆಟ್ ವಿತರಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.