ಧರ್ಮಸ್ಥಳ ಶ್ರೀ ಧ.ಮಂ. ಆಂಗ್ಲಮಾಧ್ಯಮ ಶಾಲೆಯಲ್ಲಿ ಜೇನು ಕೃಷಿ ತರಬೇತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಇಲ್ಲಿಯ ಶ್ರೀ ಧ.ಮಂ.ಆಂಗ್ಲಮಾಧ್ಯಮ ಶಾಲೆಯಲ್ಲಿ ಮಾನವ ಸಂಪನ್ಮೂಲ ಸಂಘ ಹಾಗೂ ಪರಿಸರ ಸಂಘದ ಜಂಟಿ ಆಶ್ರಯದಲ್ಲಿ ಜೇನು ಕೃಷಿಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಜೇನು ಪೆಟ್ಟಿಗೆಯ ಉದ್ಘಾಟನಾ ಕಾರ್ಯಕ್ರಮ ಮಾ.5 ರಂದು ನಡೆಯಿತು.

ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿ ಹಾಗೂ ಜೇನು ಕೃಷಿ ತರಬೇತುದಾದ ಬಾಬುರವರು ಜೇನು ಪೆಟ್ಟಿಗೆಯನ್ನು ತೆರೆದು ಉದ್ಘಾಟನೆಯನ್ನು ನೆರವೇರಿಸಿ, ಜೇನು ಹುಳಗಳ ಜೀವನ ಕ್ರಮ, ಅವುಗಳನ್ನು ಬೇರ್ಪಡಿಸುವ ರೀತಿ, ಜೇನುತುಪ್ಪ ತಯಾರಿಸುವ ವಿಧಾನ ಇತ್ಯಾದಿ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಅಲ್ಲದೆ ಶಾಲೆಗೆ ಜೇನು ಪೆಟ್ಟಿಗೆಯನ್ನು ಉಡುಗೊರೆಯಾಗಿ ನೀಡಿದರು.

ಶಾಲಾ ಮುಖ್ಯ ಶಿಕ್ಷಕಿ ಪರಿಮಳ.ಎಂ.ವಿ.ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆ ಎಂದರೆ ಕೇವಲ ಪಠ್ಯ ಪುಸ್ತಕದ ಕಲಿಕೆಯಾಗಬಾರದು. ಜೀವನಕ್ಕೆ ಬೇಕಾದ ಪಾಠವನ್ನೂ ಕಲಿಸಬೇಕು. ವಿದ್ಯಾರ್ಥಿಗಳು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ಜೇನು ಕೃಷಿಯನ್ನು ಪ್ರಾರಂಭಿಸುತ್ತಿದ್ದೇವೆ. ಜೇನುಹುಳದ ಜೀವನ ಕ್ರಮದ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು ಹಾಗೂ ಮುಂದಿನ ದಿನಗಳಲ್ಲಿ ಇಲ್ಲಿ ಸಿಗುವ ಜೇನುತುಪ್ಪವನ್ನು ಕಾರ್ಯಕ್ರಮಗಳಿಗೆ ಬರುವ ಅತಿಥಿಗಳಿಗೆ ಉಡುಗೊರೆಯಾಗಿ ನೀಡುವುದು, ಮಾತ್ರವಲ್ಲದೆ ಶಾಲೆಯಲ್ಲಿ ಒಂದು ಮಧುವನ ಪ್ರಾರಂಭಿಸುವ ಕನಸನ್ನು ನನಸು ಮಾಡಬೇಕು ಎಂದರು.
ಶಾಲಾ ಶಿಕ್ಷಕ ವೃಂದ, ಶಿಕ್ಷಕೇತರ ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  ಕು| ರಮ್ಯ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಅತಿಥಿಗಳ ಪರಿಚಯವಿತ್ತರು. ಕು|ಪುಣ್ಯಶ್ರೀ ಕಾರ್ಯಕ್ರಮ ನಿರೂಪಿಸಿ, ಪ್ರಣ್ವಿತ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.