ಮಚ್ಚಿನ: ಮಚ್ಚಿನ ಗ್ರಾಮ ಪಂಚಾಯತ್ನಲ್ಲಿ ಕುಕ್ಕಿಲ ಅನಂತಕೃಷ್ಣ ಭಟ್ ರವರ ಪೌರೋಹಿತ್ಯದಲ್ಲಿ ಮಾ.5 ರಂದು ಬೆಳಿಗ್ಗೆ ಗಣಹೋಮ ನಡೆಯಿತು.
ಗ್ರಾ.ಪಂ ನೂತನ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಉಪಾಧ್ಯಕ್ಷೆ ಡೀಕಮ್ಮ ಹಾಗೂ ಸದಸ್ಯರುಗಳಾದ ಪ್ರಮೋದ್ ಕುಮಾರ್, ಚಂದ್ರಶೇಖರ್ ಬಿ.ಎಸ್, ಸೋಮಾವತಿ, ರುಕ್ಮಿಣಿ, ಜಯಶ್ರೀ, ಪ್ರತಿಭಾ, ರಮ್ಯಶ್ರೀ, ಚೇತನ್, ರವಿಚಂದ್ರ, ಶುಭಕರ, ವಿಶ್ವರಾಜ್, ತಾರ ಇವರುಗಳು ಬಳ್ಳಮಂಜ ಶ್ರೀ ಅನಂತೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗ್ರಾ.ಪಂ ಕಟ್ಟಡದಲ್ಲಿ ಗಣಹೋಮ ನಡೆಸಿ ಪ್ರಥಮ ಸಭೆಯನ್ನು ನಡೆಸಲಾಯಿತು
ಈ ಸಂದರ್ಭದಲ್ಲಿ ತಾ.ಪಂ ಸದಸ್ಯೆ ಶ್ರೀಮತಿ ವಸಂತಿ ಲಕ್ಷಣ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೌರಿ ಶಂಕರ್, ಹಿರಿಯರಾದ ನಾರಾಯಣ ನಾವುಡ, ಕುಮಾರಯ್ಯ ನಾಯ್ಕ, ಗ್ರಾ.ಪಂ. ಸಿಬ್ಬಂದಿವರ್ಗದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.