ಬೆಳ್ತಂಗಡಿ : ನಿಬ್ರಾಸುಲ್ ಹುದಾ ಅಸೋಸಿಯೇಶನ್ ಅಳಕೆ ಬೆಳ್ತಂಗಡಿ (ಶೈಖುನಾ ಅಲ್ ಹಾಜ್ ಪಿ.ಕೆ ಮುಹಮ್ಮದ್ ಮದನಿ ಅಳಕೆ ಉಸ್ತಾದರ ಶಿಷ್ಯಂದಿರ ಸಂಘಟನೆ) ಇದರ 33 ನೇ ದರ್ಸ್ ವಾರ್ಷಿಕ ಹಾಗು ಜಲಾಲಿಯ್ಯ ರಾತೀಬ್ ಆಧ್ಯಾತ್ಮಿಕ ಮಜ್ಲಿಸ್ ಗಳು ಮತ್ತು ಅಗಲಿದ ಉಲಮಾ ನೇತಾರರ ಅನುಸ್ಮರಣಾ ಸಂಗಮ ಮರ್ಹೂಂ ಆತೂರು ಸಅದ್ ಮುಸ್ಲಿಯಾರ್ ವೇದಿಕೆ ಅಳಕ್ಕೆ ಮುಬಾರಕ್ ಕಾಂಪೌಂಡ್ ನಲ್ಲಿ ನಡೆಯಲಿದೆ.
ಈ ಹಿನ್ನಲೆ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಸಯ್ಯದ್ ಮುಖ್ತರ್ ತಂಗಳ್ ಕುಂಬೋಳ್ ಆಳಕ್ಕೆ SYS ಅಧ್ಯಕ್ಷರಾದ B.M ಉಸ್ಮಾನ್ ಹಾಜಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆ ಗೊಳಿಸಿದ್ದಾರೆ.
ಮಾ. 13 ಮಗ್ರಿಬ್ ನಮಾಝಿನ ಬಳಿಕ ಅಲ್ ಹಾಜ್ ಶೈಖುನಾ ಪಿ.ಕೆ ಮುಹಮ್ಮದ್ ಮದನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನೂರಾರು ಉಲಮಾಗಳ ನೇತೃತ್ವದಲ್ಲಿ ಉದ್ಘಾಟನೆ ಹಾಗೂ ಕೂತುಬಿಯ್ಯತ್ ಮಜ್ಲಿಸ್ ನಡೆಯಲಿದ್ದು, ಮಾ. 14ರಂದು ಹಲವಾರು ಉಲಮಾ ಉಮರಾ ನೇತೃತ್ವದಲ್ಲಿ ಖತ್ಮುಲ್ ಕುರ್ಆನ್, ಅಜ್ಮೀರ್ ಮೌಲಿದ್, ಖಿಳ್ರ್ ಮೌಲಿದ್, ಮಹಲ್ರತುಲ್ ಬದ್ರಿಯ್ಯಾ, ಜಲಾಲಿಯ್ಯಾ ರಾತೀಬ್ ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ ಬಹು ಅಸಯ್ಯಿದ್ ಕುಂಬೋಳ್ ಮುಖ್ತಾರ್ ತಂಗಳ್, ಸಯ್ಯದ್ ಉಜಿರೆ ಇಸ್ಮಾಯಿಲ್ ತಂಗಳ್, ಕಾವಲ್ ಕಟ್ಟೆ ಹಝ್ರತ್, ಅಬೂಸೂಫ್ಯಾನ್ ಮದನಿ, ಪೆರ್ನೆ ಉಸ್ತಾದ್, GM ಕಾಮಿಲ್ ಸಖಾಫಿ, ಹೈದರ್ ಮದನಿ, ಕರಾಯ ಕಾಸಿಂ ಮದನಿ, ಮಶೂದ್ ಸಅದಿ, ಹಾಗೂ ಹಲವು ಸಾದಾತ್ ಗಳು,ಉಲಮಾಗಳು ಹಾಗೂ ಉಮರಾ ನೇತಾರರೂ ಜನ ಪ್ರತಿನಿದಿಗಳೂ ಭಾಗವಹಿಸಲಿದ್ದಾರೆ.
ಪ್ರಸ್ತುತ ಸಂಗಮವನ್ನು ನಿಬ್ರಾಸುಲ್ ಹುದಾ ಅಸೋಶಿಯೇಶನ್ ಇದರ ಅಧ್ಯಕ್ಷರಾದ ಆದಮ್ ಮದನಿ ಆತೂರು ಕಾರ್ಯದರ್ಶಿ ಅಶ್ರಫ್ ಮುಸ್ಲಿಯಾರ್ ಉಚ್ಚಿಲ, ಹಾಗೂ ನಿಬ್ರಾಸುಲ್ ಹುದಾ ದರ್ಸ್ ಅಳಕೆ ಇದರ ಚೇರ್ಮನ್ ಹಸೈನಾರ್ ಆನೆಮಹಲ್ ಕನ್ವೀನರ್ ಅಬ್ದುಲ್ ಅಝೀಝ್ ಝುಹ್’ರಿ ಕಿಲ್ಲೂರು ವೆಲ್ಪೇರ್ ಚೇರ್ಮ್ಯಾನ್ ಸಿದ್ದೀಕ್ ಸಅದಿ ಮೂಳೂರು,ಕನ್ವೀನರ್ ಅಬೂಬಕ್ಕರ್ ಹಿಮಮಿ ಕುಪ್ಪೆಟ್ಟಿ ಭಾಗವಹಿಸಿದ್ದರು.