ಕ್ಯಾನ್ಸರ್ ಪತ್ತೆ, ತಪಾಸಣೆ ಶಿಬಿರಗಳನ್ನು ಹೆಚ್ಚಾಗಿ ನಡೆಸುವ ಮೂಲಕ ಕ್ಯಾನ್ಸರ್ ತಡೆಯೋಣ: ಡಾ. ಅನನ್ಯ ಲಕ್ಷ್ಮಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ), ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗ ಹಾಗೂ ಗ್ರಾಮ ಪಂಚಾಯತ್ ಕಲ್ಮಂಜ ಇವರ ಸಹಯೋಗದಲ್ಲಿ “ಮಹಿಳಾ ದಿನಾಚರಣೆ-ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವಿಕೆ ಮತ್ತು ಮಾಹಿತಿ ಕಾರ್ಯಕ್ರಮ” ನಡೆಯಿತು.

ಕಲ್ಮಂಜ ಸಭಾ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಮಾ.4ರಂದು ಆಯೋಜಿಸಿದ್ದ ಈ ಮಾಹಿತಿ ಕಾರ್ಯಗಾರವನ್ನು ಕಲ್ಮಂಜ ಗ್ರಾ. ಪಂಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಇಮ್ಮಿಯಾಜ್ ಕೆ ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಮ್ಯೂನಿಟಿ ಮೆಡಿಸಿನ್ ವಿಭಾಗದ ಡಾ. ಅನನ್ಯ ಲಕ್ಷ್ಮಿ ಎಂಬಿಬಿಎಸ್, ಎಂ.ಡಿ ಸ್ತನ ಕ್ಯಾನ್ಸರ್ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದೆ. ಕ್ಯಾನ್ಸರ್ ಪತ್ತೆ, ತಪಾಸಣೆ ಶಿಬಿರಗಳನ್ನು ಹೆಚ್ಚಾಗಿ ನಡೆಸುವ ಮೂಲಕ ಕ್ಯಾನ್ಸರ್ ಉಲ್ಬಣಗೊಳ್ಳದಂತೆ ತಡೆಯಬೇಕು‌. ಇಂತಹ ಶಿಬಿರಗಳು ಗ್ರಾಮೀಣ ಭಾಗದಲ್ಲಿ ಅಗತ್ಯವಿದೆ ಎಂದರು.

ಇನ್ನು ತಂಬಾಕು ಸೇವನೆಯಿಂದ ಸಹ ಕ್ಯಾನ್ಸರ್ ಹೆಚ್ಚುತ್ತದೆ. ಹಾಗಾಗಿ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು, ಹೆಚ್ಚಾಗಿ ಜಂಕ್ ಫುಡ್​ಗಳನ್ನು ಬಳಸಬಾರದು. ಪ್ರತಿ ದಿನ ವ್ಯಾಯಾಮ ಹಾಗೂ ವಾಕಿಂಗ್​ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

 ಸ್ತನ ಕ್ಯಾನ್ಸರ್ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳುವುದರೊಂದಿಗೆ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಲ್ಮಂಜ ಗ್ರಾ. ಪಂ ಅಧ್ಯಕ್ಷ ಎಂ ಶ್ರೀಧರ, ಗ್ರಾ. ಪಂ ಉಪಾಧ್ಯಕ್ಷೆ ಶ್ರೀಮತಿ ವಿಮಲಾ, , ಶ್ರೀ ಧ.ಮ. ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗ ಮುಖ್ಯಸ್ಥರು ರವಿಶಂಕರ್ ಕೆ ಆರ್, ಸಹ ಪ್ರಾಧ್ಯಾಪಕಿ ಶ್ರೀಮತಿ ಸ್ವಾತಿ ಬಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಶ್ರೀದೇವಿ ನಿರ್ವಹಿಸಿದರು, ಕೃಪಾಲಿ ಸ್ವಾಗತಿಸಿ, ಶ್ವೇತನ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.