ಉಜಿರೆ: ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಚ್ಚಿಲ ಎಂಬಲ್ಲಿರುವ ತ್ಯಾಜ್ಯ ಸಂಪನ್ಮೂಲ ಘಟಕಕ್ಕೆ ಸುದ್ದಿ ಬಿಡುಗಡೆ ಸಂಪಾದಕ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ ಶಿವಾನಂದ ಮತ್ತು ಬಳಗದವರು ಮಾ.4 ರಂದು ಭೇಟಿ ನೀಡಿ, ಸ್ವಚ್ಛತಾ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿ, ಹಸಿ ಮತ್ತು ಒಣ ಕಸ, ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಬೇರ್ಪಡಿಸಿ, ಹಸಿ ಕಸದಿಂದ ಸಾವಯವ ಗೊಬ್ಬರ, ತ್ಯಾಜ್ಯ ಸಂಪನ್ಮೂಲ ಘಟಕದಲ್ಲಿ ಪ್ಲಾಸ್ಟಿಕ್ ರಿ ಸೈಕ್ಲಿಂಗ್ ಕೇಂದ್ರವನ್ನು ಸ್ಥಾಪಿಸಿ, ತ್ಯಾಜ್ಯ ಮುಕ್ತ ಗ್ರಾಮವನ್ನಾಗಿ ಮಾಡುವ ಉದ್ದೇಶಕ್ಕಾಗಿ ಸಾರ್ವಜನಿಕರು ಸಹಕಾರ ನೀಡಿ ಪ್ರೋತ್ಸಾಹಿಸಿದರೆ ಸಾಧ್ಯ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಹೆಚ್ ಪ್ರಕಾಶ ಶೆಟ್ಟಿ ನೊಚ್ಚ ವಿವರಿಸಿದರು. ಸ್ವಚ್ಛತಾ ಸೇನಾನಿ ರಾಮಚಂದ್ರ ಶೆಟ್ಟಿ ಸ್ವಚ್ಛತಾ ಕಾರ್ಯ ವೈಖರಿಯ ಬಗ್ಗೆ ವಿವರ ನೀಡಿದರು.
ಸಂದರ್ಭದಲ್ಲಿ ಸುದ್ದಿ ಬೆಳ್ತಂಗಡಿ ವ್ಯವಸ್ಥಾಪಕ ಮಂಜುನಾಥ ರೈ, ಸಿಇಒ ಸಿಂಚನಾ ಊರುಬೈಲು, ಸಹಾಯಕ ವ್ಯವಸ್ಥಾಪಕ ಜಾರಪ್ಪ ಪೂಜಾರಿ ಬೆಳಾಲು ಮೊದಲಾದವರು ಉಪಸ್ಥಿತರಿದ್ದರು.