ಬೆಳ್ತಂಗಡಿ: ಲಾಯಿಲ ಗ್ರಾಮದ ಕೊಡೈಲು ನಿವಾಸಿ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಫೆ.೨ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಲಾಯಿಲ ಗ್ರಾಮದ ಕೊಡೈಲು ಮನೆ ನಿವಾಸಿ ಶ್ರೀಮತಿ ಲೀಲಾ ಮತ್ತು ಹರೀಶ್ ಎಂಬವರ ಪುತ್ರಿ ಶ್ರೀಮತಿ ಪೂಜಾ (27ವ) ನಾಪತ್ತೆಯಾಗಿರುವ ಓರ್ವರು. ಪೂಜಾರವರನ್ನು ಸುಮಾರು 7 ವರ್ಷಗಳ ಹಿಂದೆ ಪದ್ಮಪ್ರಸಾದ್ ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದು, ಅವರಿಗೆ ಆರು ವರ್ಷದ ಮಗುವಿದೆ.
ಪೂಜಾರವರು ಸುಮಾರು 5 ತಿಂಗಳ ಹಿಂದೆ ತನ್ನ ತಾಯಿ ಮನೆ ಲಾಯಿಲಕ್ಕೆ ಮಗುವಿನ ಜೊತೆ ಬಂದಿದ್ದು, ಫೆ.17ರಂದು ಬೆಳ್ತಂಗಡಿ ಪೇಟೆಗೆ ಹೋಗಿ ಬರುತ್ತೇನೆ ಹೇಳಿ ಹೋದವರು ನಂತರ ನಾಪತ್ತೆಯಾಗಿದ್ದಾರೆ ಎಂದು ತಾಯಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದಲ್ಲದೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಮದ್ದಡ್ಕ ಇಬ್ಬರು ಸೇರಿದಂತೆ ಒಟ್ಟು ಐವರು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
———————————————————-