ನಾಪತ್ತೆಯಾದ ನೆರಿಯ ಕೋಲೋಡಿಯ ನಿವಾಸಿ ತೇಜಸ್ವಿನಿ ಶವ ಕಾಡಿನಲ್ಲಿ ಪತ್ತೆ: ಆತ್ಮಹತ್ಯೆ ಶಂಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಕಳೆದ 9 ದಿನಗಳ ಹಿಂದೆ ನಾಪತ್ತೆಯಾಗಿದ್ದ, ಇಲ್ಲಿಯ ಕೋಲೋಡಿ ನಿವಾಸಿ ಯುವತಿಯ ಶವ ಮಾ.3ರಂದು ಸಂಜೆ ಸಮೀಪದ ಕೋಲೋಡಿ ಕಾಡಿನಲ್ಲಿ ಬಿದಿರು ಕಡಿಯಲು ಹೋದ ಸ್ಥಳೀಯರಿಗೆ ಕಂಡು ಬಂದಿದ್ದು, ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ನೆರಿಯ ಗ್ರಾಮದ ಕೋಲೋಡಿ ಮನೆ ನಿವಾಸಿ ಮಂಜುನಾಥ ಮಲೆಕುಡಿಯ ಮತ್ತು ಸುಶೀಲಾ ದಂಪತಿ ಪುತ್ರಿ ಉಜಿರೆಯಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದ ತೇಜಸ್ವಿನಿ (23ವ) ನಾಪತ್ತೆಯಾದವರು. ಅವರ ಶವ ಈಗ ಕಾಡಿನಲ್ಲಿ ಪತ್ತೆಯಾಗಿದೆ.

ಘಟನೆ ವಿವರ: ತೇಜಸ್ವಿನಿಯವರು ಕಳೆದ 4 ವರ್ಷಗಳಿಂದ ಉಜಿರೆ ಉಮಾ ಶೇಖರವರ ಮನೆಯಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸ್ತವ್ಯವಿದ್ದರು. ಈ ನಡುವೆ ಕಳೆದ 4 ತಿಂಗಳಿನಿಂದ ಮಧ್ಯಾಹ್ನ ನಂತರ ಉಜಿರೆ ಕಂಪ್ಯೂಟರ್ ಕೇಂದ್ರದಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆಯಲು ಹೋಗಿ ಬರುತ್ತಿದ್ದರು.

 ಫೆ.22ರಂದು ಸಂಜೆ ಕಂಪ್ಯೂಟರ್ ಕ್ಲಾಸ್ ಮುಗಿಸಿ ನೆರಿಯದಲ್ಲಿರುವ ತನ್ನ ತಾಯಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ತೇಜಸ್ವಿನಿಯವರು ಸುಮಾರು ಸಂಜೆ 4.30ಕ್ಕೆ ಅಣಿಯೂರಿಗೆ ಬಂದು ಅಲ್ಲಿಂದ ಕೋಲೋಡಿಗೆ ನಡೆದುಕೊಂಡು ಹೋಗುತ್ತಿದ್ದರು. ಈ ಸಮಯ ಜೀಪಿನಲ್ಲಿ ಹೋಗುತ್ತಿದ್ದ ಅವರ ಅಕ್ಕ ಸುಮಂಗಳರವರು ನಡೆದುಕೊಂಡು ಹೋಗುತ್ತಿದ್ದ ತೇಜಸ್ವಿನಿಯವರನ್ನು ಕಂಡು ಅವರನ್ನು ತಮ್ಮೊಟ್ಟಿಗೆ ಜೀಪಿನಲ್ಲಿ ಕರೆದುಕೊಂಡು ಹೋಗಿ ತಾಯಿ ಮನೆಯ ಹತ್ತಿರ ಇಳಿಸಿ ಬಳಿಕ ತಮ್ಮ ಮನೆಗೆ ತೆರಳಿದ್ದರು.

ಪ್ರತಿ ಸಾರಿಯೂ ನೆರಿಯದ ತಾಯಿ ಮನೆಗೆ ಹೋಗಿ ಸಂಜೆ ಉಜಿರೆಯ ಮನೆಗೆ ತೇಜಸ್ವಿನಿಯವರು ಹಿಂದಿರುಗಿ ಬರುತ್ತಿದ್ದರು. ಆದರೆ ಆ ದಿನ ರಾತ್ರಿ 7 ಗಂಟೆಯವರೆಗೂ ತೇಜಸ್ವಿನಿಯವರು ಉಜಿರೆಯ ಮನೆಗೆ ಮರಳಿ ಬಾರದೆ ಇರುವುದರಿಂದ ಉಮಾ ಶೇಖರವರು ಯುವತಿಯ ಅಕ್ಕ ಸುಮಂಗಳರವರಿಗೆ ಫೋನ್ ಕರೆ ಮೂಲಕ ಮಾಹಿತಿ ನೀಡಿದರು. ಸುಮಂಗಳರವರು ತಾಯಿಗೆ ಫೋನ್ ಮಾಡಿ ತೇಜಸ್ವಿನಿ ಉಜಿರೆಗೆ ಮರಳಿ ಹೋಗಿಲ್ಲವಂತೆ ಎಂದು ಹೇಳಿದಾಗ ತಾಯಿ ಸುಶೀಲರವರು ತೇಜಸ್ವಿನಿ ಮನೆಗೇ ಬಂದಿಲ್ಲ ಎಂದು ಹೇಳಿದಾಗ ಯುವತಿ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಮನೆಯವರು ಆಕೆಯ ಮೊಬೈಲ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿತ್ತು. ನಂತರ ತಮ್ಮ ಸಂಬಂಧಿಕರ ಮನೆಯಲ್ಲಿ ಹಾಗೂ ಊರಿನಲ್ಲಿ ಎಲ್ಲಾ ಕಡೆ ಹುಡುಕಾಡಿ ಎಲ್ಲಿಯೂ ಪತ್ತೆಯಾಗದ ಹಿನ್ನಲೆಯಲ್ಲಿ ಫೆ.23ರಂದು ಧರ್ಮಸ್ಥಳ ಪೊಲೀಸರಿಗೆ ನಾಪತ್ತೆ ದೂರು ನೀಡಲಾಗಿ ಪ್ರಕರಣ ದಾಖಲಾಗಿತ್ತು.

ಕೋಲೋಡಿ ಕಾಡಿನಲ್ಲಿ ಪತ್ತೆ: ಯುವತಿ ತೇಜಸ್ವಿನಿ ನಾಪತ್ತೆಯಾಗಿ 9 ದಿನಗಳು ಕಳೆಯುತ್ತಿದ್ದಂತೆ ಆಕೆಯ ಮೃತದೇಹ ಮನೆಯ ಸಮೀಪದ ಕೋಲೋಡಿ ಕಾಡಿನಲ್ಲಿ ಪತ್ತೆಯಾಗಿದೆ. ಸ್ಥಳೀಯರು ಬಿದಿರು ಕಡಿಯಲು ಕಾಡಿಗೆ ಹೋದಾಗ ಕಾಡಿನಲ್ಲಿ ಕೊಳೆತ ಮೃತದೇಹ ಪತ್ತೆಯಾಗಿದ್ದು, ಅವರು ನೀಡಿದ ಮಾಹಿತಿಯಂತೆ ಮನೆಯವರು ಶವ ನಾಪತ್ತೆಯಾದ ತೇಜಸ್ವಿನಿಯವರದ್ದು ಎಂದು ಪತ್ತೆ ಹಚ್ಚಿದ್ದಾರೆ.

ಬ್ಯಾಗ್‌ನಲ್ಲಿ ಮೈಲುತುತ್ತು ಪತ್ತೆ: ಯುವತಿ ತೇಜಸ್ವಿನಿಯವರ ಮೃತದೇಹದ ಬಳಿ ದೊರೆತ ಬ್ಯಾಗ್‌ನಲ್ಲಿ ಅಡಿಕೆ ಕೊಳೆರೋಗಕ್ಕೆ ಜೌಷಧಿಯಾಗಿ ಬಿಡುವ ಮೈಲುತುತ್ತು ಪತ್ತೆಯಾಗಿದ್ದು, ಯುವತಿ ಮೈಲುತುತ್ತು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯ ಎಸ್.ಐ ಪವನ್‌ಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.