ಬೆಳ್ತಂಗಡಿ: ತಾಲೂಕು ಮಟ್ಟದ ಬಾಲಕ- ಬಾಲಕಿಯರ ತ್ರೋಬಾಲ್ ಪಂದ್ಯಾಟ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು: ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಹಾಗೂ ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜು ಮಡಂತ್ಯಾರು ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಬಾಲಕ- ಬಾಲಕಿಯರ ತ್ರೋಬಾಲ್ ಪಂದ್ಯಾಟ ಇತ್ತೀಚೆಗೆ ನಡೆಯಿತು.

ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಸಂಚಾಲಕರಾದ ವಂ| ಬೇಸಿಲ್ ವಾಸ್ ಅಧ್ಯಕ್ಷತೆ ವಹಿಸಿ ಪಂದ್ಯಾಟವನ್ನು ಉದ್ಘಾಟಿಸಿದರು. ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆ ಸಹಕಾರಿಯಾಗಿದ್ದು, ಸ್ಪರ್ಧೆಯಲ್ಲಿ ಸೋಲು ಗೆಲವು ಸಾಮಾನ್ಯ. ಹಾಗಾಗಿ ಸ್ಪರ್ಧೆಯಲ್ಲಿ ಸೋತವರನ್ನು ಪ್ರೋತ್ಸಾಹಿಸಬೇಕೇ ಹೊರತು ಹಿಯಾಳಿಸಬಾರದು.ನಾವು ನಡತೆಯಿಂದ ಇನ್ನೊಬ್ಬರನ್ನು ಗೆದ್ದಾಗ ಮಾತ್ರವೇ ನಿಜವಾದ ಗೆಲುವು ನಮ್ಮದಾಗುವುದು ಎಂದು ಕ್ರೀಡಾಪಟುಗಳನ್ನು ಹುರಿದುಂಬಿಸಿದರು.

ಈ ವೇಳೆ ಮಡಂತ್ಯಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಂಗೀತಾ ಶೆಟ್ಟಿ ಕಾರ್ಯದಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ವಂ|ಜೆರೋಮ್ ಡಿಸೋಜ ಸ್ವಾಗತಿಸಿ, ಉಪನ್ಯಾಸಕರಾದ ರೆನಿಶಾ ವೇಗಸ್ ವಂದಿಸಿ, ವಸಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಇನ್ನು ಪಂದ್ಯಾಟದಲ್ಲಿ ತಾಲೂಕಿನ ಬಾಲಕ – ಬಾಲಕಿಯರ ಒಟ್ಟು ಹನ್ನೊಂದು ತಂಡಗಳು ಭಾಗ ವಹಿಸಿದ್ದು, ಬಾಲಕರ ವಿಭಾಗದಲ್ಲಿ ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜು ಪ್ರಥಮ ,ವಾಣಿ ಪ.ಪೂ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.

ಬಾಲಕಿಯರ ವಿಭಾಗದಲ್ಲಿ ವಾಣಿ ಪ.ಪೂ ಕಾಲೇಜು ಪ್ರಥಮ ಹಾಗೂ ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು. ಸಮಾರೋಪ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂ|ಜೆರೋಮ್ ಡಿಸೋಜ ಬಹುಮಾನ ವಿತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.